ಬಾಗಲಕೋಟೆ:
ಒಂದೆಡೆ ಕೂಡಲಸಂಗಮ ಪಂಚಮಸಾಲಿ ಪೀಠದಿಂದ ಜಯಮೃತ್ಯುಂಜಯ ಶ್ರೀಗಳಿಗೆ ಉಚ್ಛಾಟನೆ ಮಾಡೋದು ಬಹುತೇಕ ಫಿಕ್ಸ್‌ಆಗುತ್ತಿದ್ದಂತೆ, ಸ್ವಾಮಿಗಳ ಆರೋಗ್ಯದಲ್ಲಿ ಏರುಪೇರಾಗಿದೆ. ಪಂಚಮಸಾಲಿ ಶ್ರೀಗಳ ಆರೋಗ್ಯದಲ್ಲಿ ಶನಿವಾರ ದಿಢೀರ್ ಏರುಪೇರಾಗಿದೆ. ಬೆಳಿಗಿನ ಜಾವ ಶ್ರೀಗಳಿಗೆ ತೆಲೆನೋವು, ವಾಂತಿ, ಎದೆ ನೋವು ಕಾಣಿಸಿಕೊಂಡಿದೆ. ಅನಾರೋಗ್ಯದಿಂದ ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ದಣಿದಿರುವಂತೆ ಕಂಡಿದೆ. ಇದರಿಂದಾಗಿ ಅವರನ್ನು ಬಾಗಲಕೋಟೆ ಕೆರೂಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತುರ್ತು ನಿಗಾ ಘಟಕದಲ್ಲಿ ಸ್ವಾಮೀಜಿಗೆ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಮಠದಿಂದ ಸ್ವಾಮೀಜಿಯನ್ನ ಭಕ್ತರು ಕರೆದುಕೊಂಡು ಬಂದಿದ್ದಾರೆ. ಕೂಡಲಸಂಗಮ ಪೀಠದಿಂದ ಬಾಗಲಕೋಟೆ ಕೆರೂಡಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ಹಂತದಲ್ಲಿ ಸ್ವಾಮೀಜಿ ನಡೆದುಕೊಂಡೇ ಆಸ್ಪತ್ರೆ ಒಳಗೆ ತೆರಳಿದ್ದಾರೆ.