ವಿಜಯಪುರ: ಕಳ್ಳರಿಬ್ಬರು ಮಾಸ್ಕ್ ಧರಿಸಿ ನಗರದಲ್ಲಿ ಓಡಾಟ ನಡೆಸಿರುವ ಘಟನೆ ವಿಜಯಪುರದ ಮದೀನಾ ನಗರದಲ್ಲಿ ಗುರುವಾರ ನಡೆದಿದೆ. ಕಳ್ಳರಿಬ್ಬರು ಮಾಸ್ಕ್ ಧರಿಸಿ ಮದೀನಾ ನಗರದಲ್ಲಿ ಓಡಾಟ ಮಾಡಿದ್ದಾರೆ. ಅಲ್ಲದೇ, ಮನೆಯಿಂದ ಹೊರಗಡೆಗೆ ಬರುವ ವಿಡಿಯೋ ಲಭ್ಯವಾಗಿದೆ. ಕಳ್ಳರ ಓಡಾಟ ಪಕ್ಕದ ಮನೆಯ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಅಲ್ಲದೇ, ಮನೆಯಲ್ಲಿ ಕಳ್ಳತನ ಆಗಿದೀಯಾ ಇಲ್ವಾ ಎಂಬುದು ಪೊಲೀಸ ತನಿಖೆ ಬಳಿಕ ತಿಳಿದು ಬರಬೇಕಿದೆ. ವಿಜಯಪುರದ ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.