ವಿಜಯಪುರ: ಕಳ್ಳರಿಬ್ಬರು ಮಾಸ್ಕ್ ಧರಿಸಿ ಮನೆಯಲ್ಲಿ ಕಳ್ಳತನಗೈದು ಎಸ್ಕೇಪ್ ಆಗಿರುವ ಘಟನೆ ವಿಜಯಪುರದ ಮದೀನಾ ನಗರದಲ್ಲಿ ಗುರುವಾರ ನಡೆದಿದೆ. ಕಾಂತಾ ಪ್ರದೀಶ ಸಾವಂತ ಎಂಬುವರ ಮನೆಯಲ್ಲಿ ಕಳ್ಳತನ. ಇನ್ನೂ ಮನೆಯಲ್ಲಿದ್ದ ಚಿನ್ನದ ತಾಳಿ, ಐದು ಸಾವಿರ ನಗದು ಕಳ್ಳತನಗೈದು ಪರಾರಿಯಾಗಿದ್ದಾರೆ. ಅಲ್ಲದೇ, ಮನೆಯಿಂದ ಹೊರಗಡೆಗೆ ಬರುವ ವಿಡಿಯೋ ಲಭ್ಯವಾಗಿದೆ. ಕಳ್ಳರ ಓಡಾಟ ಪಕ್ಕದ ಮನೆಯ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ವಿಜಯಪುರದ ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.