ವಿಜಯಪುರ: ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ದ್ರಾಕ್ಷಿ ಹಾನಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ ಗ್ರಾಮದಲ್ಲಿ ಗುರುವಾರ ನಡೆದಿದೆ. ಅಲ್ಲದೇ, ಘೋಣಸಗಿ, ಬಾಬಾನಗರ, ಹುಬನೂರ, ಟಕ್ಕಳಕಿ, ಲೋಹಗಾಂವ, ಬಿಜ್ಜರಗಿ, ಸೋಮದೇವರಹಟ್ಟಿ, ಮಲಕನದೇವರ ಹಟ್ಟಿ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಮಳೆಯಿಂದ ಪಡದಲ್ಲಿದ್ದ ದ್ರಾಕ್ಷಿ ಹಾಗೂ ರ್ಯಾಕಿನಲ್ಲಿದ್ದ ಒಣದ್ರಾಕ್ಷಿ ತೊಯ್ದಿದೆ. ಪಡದಲ್ಲಿದ್ದ ದ್ರಾಕ್ಷಿ ತೊಯ್ದಿದ್ದರಿಂದ ಸಕ್ಕರೆ ಅಂಶ ಕಡಿಮೆಯಾಗಿದೆ. ಇದರಿಂದ ದರ ಕಡಿಮೆಯಾಗುತ್ತದೆ. ಕೂಡಲೇ ಹಾಳಾದ ದ್ರಾಕ್ಷಿಗಳ ಕುರಿತು ಸಮಿಕ್ಷೆ ಆರಂಭಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.