ವಿಜಯಪುರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ದೊಡ್ಡ ಅನಾಹುತ ತಪ್ಪಿರುವ ಘಟನೆ ಶನಿವಾರ ವಿಜಯಪುರ ನಗರದ ಸೈನಿಕ ಶಾಲಾ ಆವರಣದಲ್ಲಿ ನಡೆದಿದೆ. ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಬ್ಯಾರಿಕೇಡ್ಗಳು ಬಿದ್ದಿದ್ದಾವೆ. ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದ್ದ ವೇಳೆ ಗಾಳಿಯ ಒತ್ತಡಕ್ಕೆ ಬ್ಯಾರಿಕೇಡ್ಗಳು ಧರೆಗೆ ಉರುಳಿವೆ. ಆದ್ರೇ, ಯಾವುದೇ ಹಾನಿಯಾಗಿಲ್ಲ.