ವಿಜಯಪುರ: ಪ್ರತಿ ವರ್ಷದಂತೆ ಈ ವರ್ಷವೂ ಭಕ್ತರಿಂದ ಭಕ್ತರಿಗಾಗಿ ಭಕ್ತರ ಜಾತ್ರೆ ನಡೆಯಲಿದ್ದು, ಜಾತ್ಯಾತೀತ ಮಠ, ವರ್ಣಾತೀತ ಮಠದ ಪರಂಪರೆಯನ್ನು ವಿಶ್ವಕ್ಕೆ ತಿಳಿಸುವ ಉದ್ದೇಶಕ್ಕಾಗಿ ಐದು ದಿನಗಳ ವರೆಗೆ ಜಾತ್ರೆ ಹಮ್ಮಿಕೊಳ್ಳಲಾಗಿದೆ ಸುಕ್ಷೇತ್ರ ಕತ್ನಳ್ಳಿ ಶ್ರೀಮಠದ ಪರಮಪೂಜ್ಯ ಶ್ರೀ ಶಿವಯ್ಯ ಮುತ್ಯಾ ಹೇಳಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಜಾತ್ರೆಯಲ್ಲಿ ಸಂಪೂರ್ಣ ಆಡಳಿತ ಭಕ್ತರೆ ನೆರವೇರಿಸುತ್ತಾರೆ. ಭಕ್ತರೆ ಅನ್ನ ದಾಸೋಹ ತಯಾರಿಸಿ ಭಕ್ತರೆ ಭಕ್ತರಿಗೆ ಅನ್ನದಾಸೋಹ ಬಡಿಸುವ ಕೆಲಸ ನಡೆಯುತ್ತೆ ಎಂದರು. ಮನುಷ್ಯ ಜೀವನದಲ್ಲಿ ಹಚ್ಚುವ ಕೆಲಸ ಆಗಬೇಕು. ಹೊರತು ಚುಚ್ಚುವ ಕೆಲಸ ಆಗಬಾರು. ಅದಕ್ಕಾಗಿ ಈ ಬಾರಿ ವಿಶೇಷವಾಗಿ ಜ್ಞಾನ ದೀಪೋತ್ಸವ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕತ್ನಳ್ಳಿಯ ಶ್ರೀ ಗುರು ಚಕ್ರವರ್ತಿ ಸದಾಶಿವ ಜಾತ್ರಾ ಮಹೋತ್ಸವ ಬರುವ ಮಾರ್ಚ್ 21 ರಿಂದ 25ರ ವರೆಗೂ ನಡೆಯಲಿದೆ. ಅಂದು ಬೆಳಗ್ಗೆ ಜಾನುವಾರು ಜಾತ್ರೆ, ಕೃಷಿ ಮೇಳ, ಕೆಸರಿನಲ್ಲಿ ಮನುಷ್ಯರ ಓಟ, ಜ್ಞಾನ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ. ಮಾರ್ಚ್.22ಕ್ಕೆ ಕೃತ ಗದ್ದುಗೆ ರುದ್ರಾಭೀಷೇಕ, ಕುಂಬಾಭೀಷೆಕ, ರಸಪ್ರಶ್ನೆ ಸ್ಪರ್ಧೆ, ಮಾರ್ಚ್.23ಕ್ಕೆ ಪಲ್ಲಕ್ಕಿ ಉತ್ಸವ, ಉಚಿತ ಆರೋಗ್ಯ ಮೇಳ, ರಥೋತ್ಸವ, ಮಾರ್ಚ್.24ಕ್ಕೆ ಸರಳ ಸಾಮೂಹಿಕ ವಿವಾಹ, ಮಾರ್ಚ್ 25ಕ್ಕೆ ಭಾರ ಎತ್ತುವ ಸ್ಪರ್ಧೆ, ಸುಪ್ರಸಿದ್ಧ ಜಂಗಿ ಕುಸ್ತಿಗಳು, ಜಾನುವಾರುಗಳಿಗೆ ಪ್ರಶಸ್ತಿ, ಬಹುಮಾನ ವಿತರಣೆ ತದನಂತರ ಚಿತ್ರ ವಿಚಿತ್ರ ಮದ್ದು ಸುಡುವ ಕಾರ್ಯಕ್ರಮ ನಡೆಯಲಿದೆ ಎಂದರು. ಈ ವೇಳೆ ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ, ವಿಜಯ ಜೋಶಿ, ಸನ್ನಿ ಗವಿಮಠ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.