ವಿಜಯಪುರ: ಗಾಣಿಗ ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಸೋಮವಾರ ಅಖಿಲ ಭಾರತ ಗಾಣಿಗ ಸಂಘದಿಂದ ಪ್ರತಿಭಟನೆ ನಡೆಸಿದರು. ಗಾಣಿಗ ಸಮಾಜವನ್ನು ಹಿಂದುಳಿದ ವರ್ಗಗಳ ಪ್ರವರ್ಗ 2ಎ ದಲ್ಲಿ ಮುಂದುವರೆಸಬೇಕು ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಪ್ರವರ್ಗ 2ಎ ದಿಂದ ತೆಗೆದು 3ಬಿಗೆ ಸೇರಿಸಲು ನಿರ್ಣಯ ಮಾಡಿದ್ದಾರೆ. ಇದು ಖಂಡನೀಯ ಎಂದು ಕಿಡಿಕಾರಿದರು. ಅದಕ್ಕಾಗಿ ಸದರಿ ಆಯೋಗದ ಶಿಫಾರಸ್ಸು ತಿರಸ್ಕರಿಸಿ 2ಎ ಪ್ರವರ್ಗದಲ್ಲಿ ಮುಂದುವರೆಸಿಬೇಕು ಎಂದು ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.