ವಿಜಯಪುರ: ಅಕ್ಷರ ಜಾತ್ರೆಯಲ್ಲಿ ಅಕ್ಷರ ಜಾತ್ರೆಗೂ ಮುನ್ನ ಅಕ್ಷರ ದೋಷಗಳು ಕಂಡುಬಂದಿವೆ. ಹೌದು..! ವಿಜಯಪುರ ನಗರದಲ್ಲಿ ಬರುವ ಮಾರ್ಚ್ 23, 24 ಕ್ಕೆ ನಗರದ ಕಂದಗಲ್ ಹಣಮಂತರಾಯ್ ರಂಗಮಂದಿರದಲ್ಲಿ 18ನೇ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಆದ್ರೇ, ಅಕ್ಷರ ಜಾತ್ರೆ ಮುನ್ನವೇ ಅಕ್ಷರ ದೋಷಗಳು ಕಂಡು ಸಾಹಿತಿಗಳು ಅಸಮಾಧಾನ ಹೊರಹಾಕಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಾಡಿರುವ ಆಮಂತ್ರಣ ಪತ್ರಿಕೆಯಲ್ಲಿ ನಾನಾ ದೋಷಗಳು ಕಂಡುಬಂದಿದ್ದು ಹೀಗೆ… ರಾಷ್ಟ- ರಾಷ್ಟ್ರ, ಪುತಸ್ಕೃತರ- ಪುರಸ್ಕೃತ, ಅದ್ಯಕ್ಷರು- ಅಧ್ಯಕ್ಷರು ಸೇರಿದಂತೆ ನಾನಾ ಅಕ್ಷರಗಳು ದೋಷಗಳು ಕಂಡುಬಂದಿವೆ. ಅದಕ್ಕಾಗಿ ಅಕ್ಷರಗಳ ಕಗ್ಗೊಲೆ ಆಗದಂತೆ ಸಮ್ಮೇಳನ ಯಶಸ್ವಿಯಾಗ್ಲಿ ಎನ್ನುವುದು ನಮ್ಮ ಆಶಯ ಆಗಿದೆ.