ವಿಜಯಪುರ: ಪಕ್ಷಾಂತರ ಆಫರ್ ಮುಗಿದು ಹೋಗಿರುವ ಅಧ್ಯಾಯ ಆಗಿದೆ. ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ ಎಂದು ಜೆಡಿಎಸ್ ಶಾಸಕ ದೇವಾನಂದ್ ಚವ್ಹಾಣ ಹೇಳಿದರು. ವಿಜಯಪುರ ನಗರದಲ್ಲಿ ಗುರುವಾರ ಮಾಧ್ಯಮದ ಎದುರು ಮಾತನಾಡಿದ ಅವರು, ನಾನು ಜೆಡಿಎಸ್ ಪಕ್ಷ ಬಿಟ್ಟು ಹೋಗುವುದಿಲ್ಲ. ಆಫರ್ಗಳ ಹಂತ ದಾಟಲಾಗಿದೆ. ವಿಜಯಪುರ ಎಂಟು ಮತಕ್ಷೇತ್ರದಲ್ಲಿ ನಾಲ್ಕು ಸೀಟ್ ಗೆಲುವುದು ಪಕ್ಕಾ ಎಂದರು. ಸಿಂದಗಿ, ಇಂಡಿ, ಬಸವನಬಾಗೇಬಾಡಿ, ನಾಗಠಾಣ ಮತಕ್ಷೇತ್ರದಲ್ಲಿ ಗೆಲುವು ಪಕ್ಕಾ. ಪಕ್ಷದಲ್ಲಿ ಒಗ್ಗಟ್ಟಿನ ಮಂತ್ರ ನಡೆಯುತ್ತಿದೆ ಎಂದರು.