ವಿಜಯಪುರ: ವಾಯುವ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಅಂತ್ಯವಾಗಿದ್ದು, ಶಿಕ್ಷಕ ಕ್ಷೇತ್ರದಲ್ಲಿ ಶೇ. 80.15ರಷ್ಟು ಹಾಗೂ ಪದವೀಧರ ಕ್ಷೇತ್ರಕ್ಕೆ ಶೇ.62.36ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿ ಕಾರಿಯಾಗಿರುವ ಡಿಸಿ ವಿಜಯ ಮಹಾಂತೇಶ ದಾನ್ನಮ್ಮನವರ ತಿಳಿಸಿದ್ದಾರೆ.
ಬೆಳಗ್ಗೆ 8ಗಂಟೆಗೆ ಒಟ್ಟು 47ಮತಗಟ್ಟೆಯಲ್ಲಿ ಆರಂಭವಾಗಿದ್ದ ಮತದಾನ 10ಗಂಟೆ ವೇಳೆಗೆ ಶಿಕ್ಷಕ ಕ್ಷೇತ್ರ ಶೇ.11.36 ಹಾಗೂ ಪದವೀಧರ ಕ್ಷೇತ್ರಕ್ಕೆ7.95 ರಷ್ಟು ಮತದಾನವಾಗಿತ್ತು.
ಮಧ್ಯಾಹ್ನ 12ಗಂಟೆಯವರೆಗೆ ಶಿಕ್ಷಕರ ಕ್ಷೇತ್ರದಲ್ಲಿಶೇ. 34.81 ಹಾಗೂ ಪದವೀಧರ ಕ್ಷೇತ್ರಕ್ಕೆಶೇ. 24.08ರಷ್ಡು ಮತದಾನವಾಗಿತ್ತು.
ಮಧ್ಯಾಹ್ನ 2 ಗಂಟೆಯವರೆಗೆ ಶಿಕ್ಷಕರ ಕ್ಷೇತ್ರಕ್ಕೆ 59.17 ಹಾಗೂ ಪದವೀಧರ ಕ್ಷೇತ್ರಕ್ಕೆ42.58ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 4ಗಂಟೆ ವೇಳೆಗೆ ಶಿಕ್ಷಕರ ಕ್ಷೇತ್ರ 73.73 ಹಾಗೂ ಪದವೀಧರ ಕ್ಷೇತ್ರಕ್ಕೆ ಶೇ. 57.36ರಷ್ಟು ಮತದಾನವಾಗಿತ್ತು. ಒಟ್ಟು ಶಿಕ್ಷಕರ ಕ್ಷೇತ್ರಕ್ಕೆ 80.15 ಹಾಗೂ ಪದವೀಧರ ಕ್ಷೇತ್ತದಲ್ಲಿ 62.36 ರಷ್ಟು ಮತದಾನವಾಗಿದೆ.
ತಾಲೂಕುವಾರು ಅಂತಿಮ ಶೇ.ವಾರು:
ಶಿಕ್ಷಕ ಕ್ಷೇತ್ರದಲ್ಲಿ ವಿಜಯಪುರ ಶೇ. 72,39 ಬಬಲೇಶ್ವರ.ಶೇ. 95 ತಿಕೋಟಾ ಶೇ. 83.94, ಬಾಗೇವಾಡಿ ಶೇ. 80.7, ನಿಡಗುಂದಿ ಶೇ. 84.97, ಕೊಲ್ಹಾರ ಶೇ. 91.03, ಮುದ್ದೇಬಿ ಹಾಳ ಶೇ. 88.45, ತಾಳಿಕೋಟೆ ಶೇ. 87.03, ಇಂಡಿ ಶೇ. 87.96, ಚಡಚಣ ಶೇ. 86.22, ಸಿಂದಗಿ ಶೇ. 87.8 ಹಾಗೂ ದೇವರ ಹಿಪ್ಪರಗಿಯಲ್ಲಿ ಶೇ. 78.38 ರಷ್ಟು ಮತದಾನವಾಗಿದೆ.
ಪದವೀಧರ ಕ್ಷೇತ್ರ:
ವಿಜಯಪುರ ಶೇ. 56.03, ಬಬಲೇಶ್ವರ ಶೇ.61.34, ತಿಕೋಟಾ ಶೇ. 59.55, ಬಾಗೇವಾಡಿ ಶೇ. 63.71, ನಿಡಗುಂದಿ ಶೇ. 68.93, ಕೊಲ್ಹಾರ ಶೇ. 55.83, ಮುದ್ದೇಬಿಹಾಳ ಶೇ. 65.41, ತಾಳಿಕೋಟೆ ಶೇ. 70.24, ಇಂಡಿ ಶೇ. 65.83, ಚಡಚಣ ಶೇ. 70.18, ಸಿಂದಗಿ ಶೇ. 64.52 ಹಾಗೂ ದೇವರ ಹಿಪ್ಪರಗಿಯಲ್ಲಿ ಶೇ. 67.89 ರಷ್ಟು ಮತದಾನವಾಗಿದೆ. ಒಟ್ಟಾರೆ ಶಾಂತಿಯುತವಾಗಿ ಮತದಾನ ನಡೆದಿದ್ದು ಬೆಳಗಾವಿಯಲ್ಲಿ ನಡೆಯಲಿರುವ ಮತ ಎಣಿಕೆ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.