ವಿಜಯಪುರದಲ್ಲಿ 300 ಮೀ ಉದ್ದದ ಬೃಹತ್ ತಿರಂಗಾ ಯಾತ್ರೆ

Karnataka 1 News
ವಿಜಯಪುರದಲ್ಲಿ 300 ಮೀ ಉದ್ದದ ಬೃಹತ್ ತಿರಂಗಾ ಯಾತ್ರೆ

ವಿಜಯಪುರ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 300 ಮೀ ಉದ್ದದ ಬೃಹತ್ ತಿರಂಗಾ ಯಾತ್ರೆಯಲ್ಲಿ ನೂರಾರು ವಿದ್ಯಾರ್ಥಿಗಳು “ಭಾರತ್ ಮಾತಾ ಕೀ ಜೈ” “ವಂದೇ ಮಾತರಂ” ದೇಶ ಮೊದಲು ಎನ್ನುವ ಘೋಷಣೆಗಳನ್ನು ಕೂಗುತ್ತಾ ತಿರಂಗವನ್ನು ಹಿಡಿದು ನಗರದ ಶಿವಾಜಿ ವೃತ್ತದಿಂದ ಬಸವೇಶ್ವರ ವೃತ್ತದ ಮೂಲಕ ಸಿದ್ದೇಶ್ವರ ದೇವಸ್ಥಾನದವರೆಗೆ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಯುವಶಕ್ತಿಯ ಕೊಡುಗೆ ಅಪಾರವಿದೆ, ಅವರಿಗೆ ದೇಶದ ಕುರಿತು ಇದ್ದ ದೇಶಪ್ರೇಮ ಇಂದಿನ ಯುವಕರಿಗೆ ಆದರ್ಶವಾಗಬೇಕು, ಭಾರತ ದೇಶಕ್ಕೆ ಸ್ವತಂತ್ರ ದೊರಕಿದ್ದು ಸಾವಿರಾರು ಜನರ ಬಲಿದಾನದಿಂದ ಆ ಬಲಿದಾನವನ್ನು ಎಲ್ಲರೂ ನೆನಪಿಸಿಕೊಳ್ಳಬೇಕು, ಯಾವ ದೇಶ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಬಲಿದಾನಗಳನ್ನು ಸ್ಮರಿಸಿ ಕೊಳ್ಳುವುದಿಲ್ಲವೋ ಈ ದೇಶದ ಭವಿಷ್ಯ ಕರಾಳವಾಗಿರುತ್ತೆ, ಆ ರೀತಿಯ ಉದಾಹರಣೆಯನ್ನು ನಾವು ವಿದೇಶಗಳಲ್ಲಿ ನೋಡಿದ್ದೇವೆ, ಇಂದು ಭಾರತ ದೇಶ ಆರ್ಥಿಕವಾಗಿ ಪ್ರಬಲವಾಗಿದೆ, ರಕ್ಷಣಾ ಕ್ಷೇತ್ರದಲ್ಲಿ ಸಶಕ್ತ ದೇಶವಾಗಿದೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಾಧನೆ ಮಾಡುತ್ತಿದೆ, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದೆ ಹೀಗೆ ಭಾರತ ದೇಶ ವಿಶ್ವದಲ್ಲಿ ಒಂದು ಬಲಿಷ್ಠ ದೇಶವಾಗಿ ಮುನ್ನಡೆ ಸಾಧಿಸುತ್ತಿದೆ, ಇಂತಹ ಸಮಯದಲ್ಲಿ ದೇಶದ ಅಭಿವೃದ್ಧಿಯ ವೇಗವನ್ನು ಹೆಚ್ಚಳ ಮಾಡುವಲ್ಲಿ ದೇಶದ ಪ್ರತಿಯೊಬ್ಬ ನಾಗಕರಿನ ಜವಾಬ್ದಾರಿಯಾಗಿದೆ ಎಂದರು. ಎಬಿವಿಪಿಯ ವಿಭಾಗ ಸಂಘಟನಾ ಕಾರ್ಯದರ್ಶಿ ಹರ್ಷ ನಾಯಕ ಮಾತನಾಡಿ ನಗರದ ಕಾಲೇಜು ವಿದ್ಯಾರ್ಥಿಗಳು ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿದರು, ಎಬಿವಿಪಿ ಪ್ರತಿ ವರ್ಷ ಈ ರೀತಿಯ ಕಾರ್ಯಕ್ರಮವನ್ನು ಮಾಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಕಾಲೇಜಿನ ವಿದ್ಯಾರ್ಥಿ ಕೇವಲ ಒಬ್ಬ ಸಾಮಾನ್ಯ ವಿದ್ಯಾರ್ಥಿಯಲ್ಲ ಅವನು ನಮ್ಮ ದೇಶದ ಇಂದಿನ ಪ್ರಜೆ ಈ ಮೂಲಕ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕಾರ್ಯ ಮಾಡುತ್ತಿದೆ. ನಗರದ ತುಂಗಳ ಶಿಕ್ಷಣ ಸಂಸ್ಥೆ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆ, ಶಾಂತಿನಿಕೇತನ ಕಾಲೇಜು, ಸೇಂಟ್ ಜೋಸೆಫ್ ಕಾಲೇಜು ಹಾಗೂ ಹಲವಾರು ಕಾಲೇಜುಗಳ 1,200 ವಿದ್ಯಾರ್ಥಿಗಳು ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಸುಮಾ ಬೋಳರೆಡ್ಡಿ, ಅಮಿತಕುಮಾರ ಬಿರಾದಾರ, ಸಂಜು ಕುಲಕರ್ಣಿ, ಸಂದೀಪ ಅರಳಗುಂಡಿ, ಶಶಿಕಾಂತ ರಾಕ್ಲೆ, ಮಂಜುನಾಥ ಹಳ್ಳಿ, ಐಶ್ವರ್ಯ ಕುಲಕರ್ಣಿ, ಸ್ನೇಹಾ ಹಿರೇಮಠ, ಪ್ರವೀಣ ಬಿರಾದಾರ, ಸುರೇಖಾ ಕುಲಕರ್ಣಿ, ಚೇತನ ಕೋರವಾರ, ದಾನಮ್ಮ ಹೊಸಮನಿ, ತ್ರಿಶಿಲಾ ರಾಠೋಡ, ಸುನೀಲ ರಾಠೋಡ, ಸಂಪತ್, ಮೋಹನ ಗುಣದಾಳ, ಸುರೇಶ ಲೋನಾರ ಇತರರು ಉಪಸ್ಥಿತರಿದ್ದರು.

ಯಾವುದೇ ಶತ್ರು ದೇಶಗಳ ಆಂತಕ ಇಂದು ಭಾರತಕ್ಕೆ ಇಲ್ಲ, ಅಷ್ಟು ಬಲಿಷ್ಠವಾದ ಸೇನೆ ಇಂದು ದೇಶದಲ್ಲಿ ಇದೆ, ಆದರೆ ಕೆಲವೊಂದಿಷ್ಟು ದೇಶದ ಒಳಗಡೆ ಇರುವ ದೇಶವಿರೋಧಿ ಶಕ್ತಿಗಳ ಬಗ್ಗೆ ಜಾಗೃತರಾಗಿ ಇರಬೇಕಾಗಿದೆ.
-ಸಚಿನ ಕುಳಗೇರಿ
ಎಬಿವಿಪಿ ರಾಜ್ಯ ಕಾರ್ಯದರ್ಶಿ.

ತಿರಂಗಾ ನಮ್ಮ ದೇಶದ ಹೆಮ್ಮೆಯ ಪ್ರತೀಕ ಆ ತಿರಂಗಾವನ್ನು ಹಿಡಿದಿದ್ದು ನಮ್ಮ ಸೌಭಾಗ್ಯ. ಎಬಿವಿಪಿ ಈ ಕಾರ್ಯಕ್ರಮ ಆಯೋಜಿಸಿದ್ದು ಸಂತೋಷವಾಗಿದೆ.
ಸಾಕ್ಷಿ ಕೋಟ್ಯಾಳ,ತುಂಗಳ ಕಾಲೇಜು ವಿದ್ಯಾರ್ಥಿ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";