ವಿಜಯಪುರ: ಮುಂಬರುವ ಹಬ್ಬದಲ್ಲಿ ಅಹಿತಕರ ಘಟನೆಗಳು ಆಗದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಎಂಟು ರೌಡಿಗಳನ್ನು ಗಡಿಪಾರು ಮಾಡಿ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಆದೇಶ ಹೊರಡಿಸಿದ್ದಾರೆ. ರವಿ ಬಾಡಗಂಡಿ(ಒಂದು ವರ್ಷ ಕಲಬುರಗಿ), ಮಹಮ್ಮದ್‌ಹನೀಫ್ ಬಾಗವಾನ್(ಆರು ತಿಂಗಳು ಶಿವಮೊಗ್ಗ), ರವಿ ನಂದಿ(ಆರು ತಿಂಗಳು ಚಾಮರಾಜನಗರ), ಮಹಮ್ಮದ್‌ಸಾಜೀದ ಸತ್ತಾರ(ಆರು ತಿಂಗಳು ಬೀದರ್), ಜಮೀರ್ ಮುಲ್ಲಾ(3 ತಿಂಗಳು ಬಳ್ಳಾರಿ), ಹಣಮಂತಪ್ಪ ಹಳ್ಳಿ(3 ತಿಂಗಳು ಧಾರವಾಡ), ಚೇತನ ಜತ್ತಿ (6 ತಿಂಗಳು ಕಲಬುರಗಿ), ಯಮನಪ್ಪ ಕಟ್ಟಿಮನಿ (6 ತಿಂಗಳು ಹಾವೇರಿ)ಗೆ ಗಡಿಪಾರು ಮಾಡಲಾಗಿದೆ. ಅಲ್ಲದೇ, ಜಿಲ್ಲೆಯಲ್ಲಿ 1212 ರೌಡಿಗಳಿದ್ದು, ಅದರಲ್ಲಿ 27 ರೌಡಿಗಳ ಗಡಿಪಾರು ಮಾಡಲು ಉಪ ವಿಭಾಗಿಯ ದಂಡಾಧಿಕಾರಿ ಪ್ರಸ್ತಾವನೆಯನ್ನು ಸಲ್ಲಿಸಿದರು. ಇದನ್ನು ಪರಿಗಣಿಸಿ ಎಂಟು ರೌಡಿಗಳನ್ನು ಗಡಿಪಾರು ಮಾಡಲಾಗಿದೆ ಎಂದು ಎಸ್ಪಿ ನಿಂಬರಗಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ.