*ವಿಜಾಪುರ ಚಾಮುಸ್ಲಿಂ ಪೇಜ್ ವಿರುದ್ದ ಸುಮೊಟೊ ಕೇಸ್ ದಾಖಲು; ಶಾಂತಿ ಕದಡಲು ಯತ್ನಿಸಿದ ಕಿಡಿಗೇಡಿ ಪೇಜ್*
ಆ್ಯಂಕರ್: ಗಣೇಶೋತ್ಸವ ಸಂದರ್ಭದಲ್ಲಿ ಶಾಂತಿ ಕದಡಲು ಯತ್ನಿಸಿದ ಸಾಮಾಜಿಕ ಜಾಲತಾಣದ ಮೇಲೆ ವಿಜಯಪುರ ಪೊಲೀಸರು ಸುಮೊಟೊ ಕೇಸ್ ದಾಖಲಿಸಿಕೊಂಡಿದ್ದಾರೆ. ಇನ್ಸಟಾಗ್ರಾಮದಲ್ಲಿರುವ ವಿಜಾಪುರಚಾಮುಸ್ಲಿಂ ಎನ್ನುವ ಪೇಜ್ ನಲ್ಲಿ ಎರಡು ವರ್ಷಗಳ ಹಿಂದಿನ ವಿಡಿಯೋ ಹರಿಬಿಟ್ಟು ಶಾಂತಿ ಕದಡುವ ಯತ್ನದಲ್ಲಿದ್ದ ಕಿಡಿಗೇಡಿ ಪೇಜ್ ವಿರುದ್ದ ವಿಜಯಪುರ ನಗರದ ಗೋಲ್ ಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಇನ್ನೂ ಈ ಕುರಿತು ತಮ್ಮ ಪೆಸ್ಬುಕ್ ಪೇಜ್ ನಲ್ಲಿ ಮಾಹಿತಿ ನೀಡಿರುವ ಪೊಲೀಸರು 2 ವರ್ಷ ಹಳೆಯದಾದ ಒಂದು ವೀಡಿಯೊವನ್ನು ದುರುದ್ದೇಶದಿಂದ ಕೆಲವು ಅರಾಜಕತಾವಾದಿಗಳು ಮರುಪ್ರಸಾರ ಮಾಡಿದ್ದಾರೆ. ಸಮಾಜದಲ್ಲಿ ಸಾಮುದಾಯಿಕ ಸೌಹಾರ್ದತೆಗೆ ಧಕ್ಕೆಯುಂಟು ಮಾಡುವ ಪ್ರಯತ್ನ ಮಾಡಿದ್ದಾರೆ.
ಇಂತಹ ವೀಡಿಯೊವನ್ನು ಸೃಷ್ಟಿಸಿ ಹಂಚಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳ ಲಾಗುವುದು ಎಂದು ಎಚ್ಚರಿಕೆ ಸಹ ನೀಡಿದ್ದಾರೆ. ಸಾರ್ವಜನಿಕರು ದೃಢಪಡಿಸದ ಸಂದೇಶಗಳು/ವೀಡಿಯೊಗಳನ್ನು ಹಂಚುವುದಿಲ್ಲವೆಂದು ವಿನಂತಿಸಿ, ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರಿಗೆ ಸಹಕರಿಸುವಂತೆ ವಿನಂತಿಸಿದ್ದಾರೆ.