ಗದಗ: ಮದುವೆ ಅಂದ್ರೆ ಅಲ್ಲಿ ಮಂತ್ರಘೋಷ, ವಾದ್ಯಮೇಳ ಸೇರಿದಂತೆ ಇನ್ನಿತರ ಸಂಪ್ರದಾಯದ ಮೂಲಕ ಸಪ್ತಪದಿ ತುಳಿಯುತ್ತಾರೆ. ಆದರೆ ನಾಲತವಾಡ,ಗುಳೇದಗುಡ್ಡ ಮೂಲದ ಬರಗುಂಡಿ ಮನೆತನದ ಶರಣ ದಂಪತಿಗಳಾದ ಅನ್ನಪೂರ್ಣ ಹಾಗೂ ಅಶೋಕ ಬರಗುಂಡಿ ದಂಪತಿಗಳ ಪುತ್ರ ಆಕಾಶರವರ ಕಲ್ಯಾಣ ಮಹೋತ್ಸವವು ಗದುಗಿನ ವನಜಾಕ್ಷೀ ಹಾಗೂ ಪ್ರೋ ದಯಾನಂದ ಗೌಡರ ರವರ ಪುತ್ರಿ ಸುಷ್ಮಾ ರೊಂದಿಗೆ ಗದಗಿನ ಎಸ್.ಬಿ.ಎಸ್ ಗಾರ್ಡನ್ ದಲ್ಲಿ ವರ ಹಾಗೂ ವಧು ಹೆಣ್ಣು ಗಂಡೆಂಬ ಭೇದ ಮರೆತು ಪರಸ್ಪರರು ಮಾಂಗಲ್ಯ ಕಟ್ಟಿಸಿಕೊಂಡರು,ಭಾರತದ ಸಂವಿಧಾನ ಪ್ರತಿಜ್ಞಾ ವಿಧಿ ಸ್ವೀಕಾರ,ಪುಸ್ತಕ ಬಿಡುಗಡೆ ಸೇರಿದಂತೆ ಹಲವು ವಿಶಿಷ್ಟಗಳ ನಡುವೆ ಲಿಂಗಾಯತ ಧರ್ಮ ವಿಧಿ ವಿಧಾನಗಳ ಮೂಲಕ ವಿಜೃಂಭಣೆಯಿಂದ ನಡೆಯಿತು.
ನಾಡಿನ ಖ್ಯಾತ ಬುದ್ದ ಬಸವ ಅಂಬೇಡ್ಕರ್ ತತ್ವ ಚಿಂತಕರು,ಬಸವ ಧರ್ಮ ಪ್ರವರ್ತಕರು,ಲಿಂಗಾಯತ ಧರ್ಮಗಳ ಲೇಖಕರು,ಲಿಂಗಾಯತ ವಿರಕ್ತ ಮಠಾಧೀಶರ ನೇತೃತ್ವದಲ್ಲಿ ನವ ದಂಪತಿಗಳಿಗೆ ಭಾರತ ಸಂವಿಧಾನ ಪೀಠಿಕೆ ಪಠಣ,ಬಸವಾದಿ ಶರಣರ ವಚನ ಘೋಷಗಳೊಂದಿಗೆ ಅಪ್ಪ ಬಸವಣ್ಣನವರ ಮೂರ್ತಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಲ್ಯಾಣ ಮಹೋತ್ಸವಕ್ಕೆ ಮುನ್ನುಡಿ ಇಡಲಾಯಿತು.
ನವ ದಂಪತಿಗಳು ಲಿಂಗಾಯತ ಧರ್ಮದ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು,ಬಳಿಕ ಪರಸ್ಪರ ರುದ್ರಾಕ್ಷಿ ಕಂಕಣ ಕಟ್ಟಿಕೊಂಡರು,ವಿಭೂತಿಯನ್ನು ಧರಿಸಿಕೊಂಡು ಅವುಗಳಿಗೆ ಸಂಬಂಧಿಸಿದ ವಚನಗಳನ್ನು ಹೇಳುತ್ತ ಹಸೆಮಣಿ ಏರಿದರು,ದಾಂಪತ್ಯ ಬಂಧನದ ವಿಧಿ ವಿಧಾನಗಳನ್ನು ಶರಣ ತತ್ವದಲ್ಲಿ ಪಾಲಿಸಲು ನವ ಜೋಡಿಗೆ ಸಿಂಧನೂರಿನ ವೀರಭದ್ರಪ್ಪ ಕುರಕುಂದಿ ವಚನ ಪ್ರತಿಜ್ಞೆ ಭೋಧಿಸಿದರು.
ಇಲಕಲ್ಲದ ಗುರುಮಹಾಂತಪ್ಪಗಳು ಲಿಂಗಾಯತ ಧರ್ಮ ಪೀಠಿಕೆ ಹಾಗೂ ಪ್ರಮಾಣ ವಚನ ಬೋಧಿಸಿದರು. ಶರಣ ಸಾಹಿತಿ,ಪತ್ರಕರ್ತರಾದ ರಮಜಾನ್ ದರ್ಗಾ ಹಾಗೂ ಡಾ.ಜೆ.ಎಸ್.ಪಾಟೀಲ ಆಶಯ ನುಡಿಗಳನ್ನಾಡಿದರು.ಮಕ್ಕಳಿಗಾಗಿ ಭಾರತ ಸಂವಿಧಾನ ಎಂಬ ಪುಸ್ತಕದ ಬಿಡುಗಡೆಗೊಳಿಸಲಾಯಿತು. ವಚನ ಪ್ರತಿಜ್ಞೆ,ವಚನ ಬಂಧದೊಂದಿಗೆ ಲಿಂಗ ತಾರತಮ್ಯ ನಿವಾರಣೆ ಗಾಗಿ ವರ ಆಕಾಶನಿಗೆ ವಧು ಸುಷ್ಮಾ ಮಾಂಗಲ್ಯ ಹಾಕಿದರೆ,ಸುಷ್ಮಾ ಅವರಿಗೆ ಆಕಾಶ ಮಾಂಗಲ್ಯ ಹಾಕುವ ಮೂಲಕ ಲಿಂಗ ಸಮಾನತೆ ಮೆರೆದರು,ವರನ ಹಾಗೂ ವಧುವಿನ ಮಾಂಗಲ್ಯ ಸರ ದಲ್ಲಿ ಷಟಸ್ಥಲ ಹಾಗೂ ಇಷ್ಟ ಲಿಂಗದ ಕುರುಹುಗಳನ್ನು ಕಾಣಬಹುದು.
ಸಾಧಕರಾದ ಲಿಂಗಸೂರಿನ ನಾರಿನಾಳ ಶರಣರನ್ನ ಹಾಗೂ ಸಿಂಧನೂರಿನ ವೀರಭದ್ರಪ್ಪ ಕುರಕುಂದಿ ದಂಪತಿಗಳನ್ನು,ಶರಣ ಸಾಹಿತಿ ರಮಜಾನ್ ದರ್ಗಾ ಇವರನ್ನು ಈ ವೇಳೆ ಸನ್ಮಾನಿಸಲಾಯಿತು.
ಮದುವೆಯ ಮಂಟಪದಲ್ಲಿ ನಾಲತವಾಡದ ಶರಣ ವೀರೇಶ್ವರರ,ಸಜ್ಜಲಗುಡ್ಡದ ಶರಣಮ್ಮನವರ,ಇಲಕಲ್ಲದ ಮಹಾಂತಪ್ಪಗಳ,ಗದುಗಿನ ಸಿದ್ದಲಿಂಗ ಶ್ರೀಗಳ,ಶಿರೂರದ ಡಾ.ಬಸವಲಿಂಗ ಸ್ವಾಮಿಜಿಗಳ,ಕುವೆಂಪು,ಅಂಬೇಡ್ಕರ್,ಡಾ.ಬಸವನಾಳ,ಫ.ಗು.ಹಳಕಟ್ಟಿ,ವಿವೇಕಾನಂದ,ಹರ್ಡೇಕರ ಮಂಜಪ್ಪ ನವರ,ರೆವರೆಂಡ್ ಫಾದರ್ ಉತ್ತಂಗಿ ಚೆನ್ನಪ್ಪ,ಹುತಾತ್ಮ ಧೀರ ಡಾ.ಎಂ.ಎಂ.ಕಲಬುರ್ಗಿಯವರ,ಅಥಣಿಯ ಮುರುಗೇಂದ್ರ ಶಿವಯೋಗಿಗಳು ಸೇರಿದಂತೆ ಹಲವು ಮಹನೀಯರ ಭಾವ ಚಿತ್ರ, ಆದರ್ಶದ ಶುಭಾಶಯ ನುಡಿಗಟ್ಟುಗಳ ಕಟೌಟ್ ರಾರಾಜಿಸಿದವು.
ನಾಡಿನ ಲಿಂಗಾಯತ ಮಠಾಧೀಶರಾದ ಇಲಕಲ್ಲದ ಗುರುಮಹಾಂತಪ್ಪಗಳು,ಶಿರೂರದ ಡಾ.ಬಸವಲಿಂಗ ದೇವರು,ಗುಳೇದಗುಡ್ಡ ಸ್ವಾಮಿಗಳು,ಲಿಂಗಸೂರಿನ ಸಿದ್ಧಲಿಂಗ ಸ್ವಾಮೀಜಿ,ರಾಷ್ಟ್ರೀಯ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ,ಗದುಗಿನ ತೋಂಟದಾರ್ಯ ಮಠದ ಶ್ರೀಗಳು,ನಾಡಿನ ವಿವಿಧ ಬಸವ ಕೇಂದ್ರದವರು ಹಾಜರಿದ್ದು ಸಾಕ್ಷಿಕರಿಸಿದರು.ನವ ದಂಪತಿಗಳಿಗೆ ಅಕ್ಷತೆಯ ಬದಲಾಗಿ ಪುಷ್ಪ ವೃಷ್ಟಿ ಮಾಡಲಾಯಿತು.ದಾವಣಗೆರೆಯ ಬಸವ ಕಲಾ ಲೋಕದ ಬಳಗ ಹಾಗೂ ಚಿತ್ರದುರ್ಗದ ಶರಣಿ ಕೋಕಿಲಾ ತಾಯಿಯವರ ಮಧುರ ಕಂಠದಲ್ಲಿ ವಚನ ಗಾಯನ ಎಲ್ಲರ ಮನ ಸೂರೆಗೊಂಡಿತು.ನಾಡಿನ ಹಲವು ಮೂಲೆಗಳಿಂದ ಹರಿದುಬಂದ ನಾಲ್ಕು ಸಾವಿರಕ್ಕೂ ಅಧಿಕ ಶರಣ ಜೀವಿಗಳಿಗೆ ಹಲವು ವಿಶಿಷ್ಟವಾದ ಭಕ್ಷ್ಯ ಭೋಜನದ
ಭಾರೀ ವ್ಯವಸ್ಥೆ ಮಾಡಿಸಲಾಗಿತ್ತು,ಕಲ್ಯಾಣ ಮಹೋತ್ಸವದಲ್ಲಿ ಭಾಗವಹಿಸಿದ ಎಲ್ಲರಿಗೂ
ಉಡುಗೊರೆ ಯಾಗಿ ಬಸವಾದಿ ಶರಣರ ವಚನಗಳ ಪುಸ್ತಕ,ಭಾರತದ ಸಂವಿಧಾನದ ಪುಸ್ತಕ ಕೊಡಲಾಯಿತು.
ಈ ವೇಳೆ ಲಿಂಗಾಯತ ಧರ್ಮಗುರು ಬಸವಣ್ಣನವರ, ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್, ನಾರಾಯಣ ಗುರು ಹಾಗೂ ರಾಷ್ಟ್ರಕವಿ ಕುವೆಂಪು ಅವರ ಆದರ್ಶವನ್ನು ಬಂದವರು ಸ್ಮರಿಸಿದರು. ಮದುವೆಗೆ ಬಂದವರು ಮಹಾನ್ ಪುರುಷರು ಹಾಕಿಕೊಟ್ಟ ಹಾದಿಯಲ್ಲಿ ಸಾಗಿ ಎಂದು ಹಾರೈಸಿದರು. ನಾಲತವಾಡ. ಅಂತೆ ಹಾಕಿ ಸರ್ ಹೆಸರು ಹಾಕ ಬೇಡಿ ಸರ್ ಇದರ ಬಗ್ಗೆ ಡಾ ಜಿ.ಎಸ್ ಪಾಟೀಲ ಮಾತನಾಡಿದರು.