ವಿಜಯಪುರ: ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ ಮೊಮ್ಮಗನ ಮೃತ ದೇಹ ಕಂಡು ತಾತನೊಬ್ಬ ಹೃದಯಾಘಾತಕ್ಕೆ ಒಳಗಾಗಿ ಇಹಲೋಕ ತ್ಯಜಿಸಿದ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ವಂದಾಲ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ವಂದಾಲ ಗ್ರಾಮದ ಅಭಿಷೇಕ ಪ್ಯಾಟಿಗೌಡ್ರ (18) ಮೃತಪಟ್ಟಿರುವ ದುರ್ದೈವಿ. ಇನ್ನೂ ಬೈಕ್ ನಲ್ಲಿ ಹೋಗುತ್ತಿದ್ದಾಗ ಲಾರಿಗೆ ಡಿಕ್ಕಿ ಹೊಡೆದು ಅಭಿಷೇಕ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಇನ್ನೂ ಮೊಮ್ಮಗನ ಮೃತ ದೇಹ ನೋಡಿ ತಾತ ಬಸಪ್ಪ ಗುಡ್ಡದ (74) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೊಮ್ಮಗ ಹಾಗೂ ತಾತನ ಅಂತ್ಯಕ್ರಿಯೆಯನ್ನು ವಂದಾಲ ಗ್ರಾಮದಲ್ಲಿ ನಡೆಯಿತು.