ವಿಜಯಪುರ: ಜನರ ಸುರಕ್ಷಿತೆಗಾಗಿ ನಗರಾದ್ಯಂತ ಸಿಸಿಟಿವಿ ಅಳವಡಿಸಲಾಗಿದೆ ಎಂದು ಎಸ್ಪಿ ಎಚ್ಡಿ ಆನಂದಕುಮಾರ ಮಾಹಿತಿ ನೀಡಿದರು. ವಿಜಯಪುರ ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೈಂ ತಡೆಗಟ್ಟಲು, ಅಪಘಾತ ದೃಶ್ಯ ಸೆರೆಗಾಗಿ ಸಿಸಿಟಿವಿ ಅಳವಡಿಸಲಾಗಿದೆ. ಅಲ್ಲದೇ, ನಗರದಾದ್ಯಂತ ವಿವಿಧ ಕಡೆಗೆ 100 ಸಿಸಿಟಿವಿ ವ್ಯವಸ್ಥೆ ಮಾಡಲಾಗಿದೆ. ಇದರ ಉಪಯೋಗವನ್ನು ನಗರದ ಸಂಚಾರಿ ಪೊಲೀಸ ಠಾಣೆಯಲ್ಲಿ ಮಾಡಲಾಗಿದ್ದು, ಇದನ್ನು ಸಂಚಾರಿ ಪೊಲೀಸರು ಕಂಟ್ರೋಲ್ ಮಾಡುತ್ತಾರೆ. ನಗರಾದ್ಯಂತ ಸರಗಳ್ಳತನ, ಅಪಘಾತ, ಕ್ರೈಂ ತಡೆಗಟ್ಟಲು ಪೊಲೀಸ ಇಲಾಖೆ ಈ ವ್ಯವಸ್ಥೆ ಮಾಡಿದೆ ಎಂದರು.