ಹುಬ್ಬಳ್ಳಿ: ಕೆಲದಿನಗಳ ಹಿಂದೆ ಹುಬಳ್ಳಿಯ ರೈಲ್ವೇ ಕ್ವಾಟರ್ಸನಲ್ಲಿ ಕಳ್ಳತನ ಪ್ರಕರಣ ಭೇದಿಸಲಾಗಿದೆ. ಘಟನೆಗೆ ಸಂಭಂದಿಸಿದಂತೆ ಕೇಶ್ವಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ್ ಓರ್ವ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ. ಆರೋಪಿಯನ್ನು ಪತ್ತೆ ಹಚ್ಚುವ ಯಶಸ್ವಿಯಾದ ಪೊಲೀಸರು ಆರೋಪಿತನಿಂದ 2,20 ಲಕ್ಷದ ಬೆಲೆಬಾಳುವ 44 ಗ್ರಾಂ ತೂಕದ ಬಂಗಾರದ ಮತ್ತು,15 ಸಾವಿರ ಬೆಲೆಬಾಳುವ 210 ಗ್ರಾಂ ತೂಕದ ಬೆಳ್ಳಿ ಆಭರಣ ಸೇರಿದಂತೆ ಒಟ್ಟು 2,35 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತಂತೆ ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.