ವಿಜಯಪುರ: ಆಕಸ್ಮಿಕ ಬೆಂಕಿ ಅವಘಡದಿಂದ ಲಕ್ಷಾಂತರ ಮೌಲ್ಯದ ಕಬ್ಬು ಹಾನಿ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಗುಬ್ಬೆವಾಡ ಗ್ರಾಮದಲ್ಲಿ ಗುರುವಾರ ನಡೆದಿದೆ. ಬಸವರಾಜ್ ಕರಬಂಟನಾಳ್ ಎಂಬುವರ ಕಬ್ಬು ಭಸ್ಮವಾಗಿದೆ. ಅಲ್ಲದೇ, ಏಳು ಎಕರೆ ಕಬ್ಬು ಬೆಳೆಯಲಾಗಿತ್ತು. ಆಕಸ್ಮಿಕ ಬೆಂಕಿ ಅವಘಡದಲ್ಲಿ ನಾಲ್ಕು ಎಕರೆ ಕಬ್ಬು ಹಾನಿಯಾಗಿದೆ. ಸ್ಥಳಕ್ಕೆ ಸಿಂದಗಿ ಅಗ್ನಿಶಾಮಕ ದಳದವರು ಭೇಟಿ ನೀಡಿ ಬೆಂಕಿ ನಂದಿಸಿದರು. ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.