ಮಹಾರಾಷ್ಟ್ರ: ಈರುಳ್ಳಿ ಬೆಳೆದ ರೈತನಿಗೆ ಬರೋಬ್ಬರಿ ಎರಡು ರೂಪಾಯಿ ನೀಡಲಾಗಿದೆ. ಹೌದು..! ಮಹಾರಾಷ್ಟ್ರ ರಾಜ್ಯದ ಜಿಲ್ಲೆಯ ಸೊಲ್ಲಾಪುರ ರೈತ ರಾಜೇಂದ್ರ ಚವ್ಹಾಣ ಈರುಳ್ಳಿ ಬೆಳೆದಿದ್ದರು. ಇನ್ನು ಬೆಳೆದ ಈರುಳ್ಳಿಯನ್ನು ರೈತ 10 ಚೀಲ ಈರುಳ್ಳಿ ಮಾರುಕಟ್ಟೆಗೆ ತಂದಿದ್ದರು. ವರ್ತಕರು 10 ರೂ.ಗೆ ಖರೀದಿಸಿದರು. ಒಟ್ಟು 512 ಕೆಜಿ ಈರುಳ್ಳಿಗೆ 512 ರೂ. ಬಂದಿದ್ದು, ಈ ಪೈಕಿ 509.51 ರೂ. ಸಾಗಾಣಿಕೆ,
ಕೂಲಿ ಹಾಗೂ ಇತರೆ ವೆಚ್ಚದಲ್ಲಿ ನಷ್ಟವಾಗಿದೆ. ಬಳಿಕ ಎಲ್ಲಾ ಖರ್ಚು ಕಳೆದು ರೈತನಿಗೆ 2 ರೂಪಾಯಿ ಚೆಕ್ ನೀಡಲಾಗಿದೆ. ಹೀಗಾಗಿ ರೈತರ ಮಾರುಕಟ್ಟೆಯಲ್ಲಿ ಕಣ್ಣೀರಿಟ್ಟಿದ್ದಾನೆ.