ವಿಜಯಪುರ: ಮದ್ಯ ಕೂಡಿಸುವರಿಗೆ ನೀರಿನ ಬೆಲೆ ಗೊತ್ತಿಲ್ಲ ಎಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ವಿರುದ್ಧ ಶಾಸಕ ಎಂಬಿ ಪಾಟೀಲ್ ವಾಗ್ದಾಳಿ ಮಾಡಿದರು.
ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ಜಾಲಗೇರಿ ಎಲ್ಟಿ 4ರಲ್ಲಿ ಮಾತನಾಡಿದ ಅವರು, ಮದ್ಯದ ಒಳಗೆ ನಮ್ಮ ನೀರಿನ್ನೆ ಮಿಕ್ಸ್ ಮಾಡಿ ಸಾರಾಯಿ ಕುಡಿಸುತ್ತಾರೆ. ಅಲ್ಲದೇ, ನೀರು ಎಷ್ಟು ಬಿಡಬೇಕು ಎಂಬುದು ಅವರಿಗೆ ಗೊತ್ತಿಲ್ಲ. ಅದಕ್ಕಾಗಿ ಆರು ದಿನ ಮಾತ್ರ ನೀಡಬೇಕು ಎಂದು ಲೆಟರ್ ಇದೆ ಎಂದು ವ್ಯಂಗ್ಯ ಮಾಡಿದರು. ಮದ್ಯ ಮಾರಾಟ ಮಾಡುವವರ ವಿರುದ್ಧ ಚುನಾವಣೆಯಲ್ಲಿ ನಿಲ್ಲಲು ನಮ್ಗೂ ನಾಚಿಕೆ ಆಗುತ್ತದೆ. ಇನ್ನೂ ಕೋವಿಡ್ ಸಂದರ್ಭದಲ್ಲಿ 500 ರೂಪಾಯಿ ಮೌಲ್ಯದ ಮದ್ಯವನ್ನು 2 ಸಾವಿರಕ್ಕೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದರು. ಅದಕ್ಕಾಗಿ ಮತದಾರರ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದರು.