ವಿಜಯಪುರ: ಅಕ್ರಮವಾಗಿ ಮಾವಾ ತಯಾರಿಸುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ನಡೆದಿದೆ. ಮುಬಾರಕ್ ಬಾಗವಾನ್, ಚಂದ್ರಶೇಖರ ಯಡಹಳ್ಳಿ, ಯಲ್ಲಾಲಿಂಗ ಹಡಪದ, ಹಣಮಂತ ತಳಕೇರಿ ಬಂಧಿತರು. ಅಲ್ಲದೇ, ಅಕ್ರಮವಾಗಿ ಮಾವಾ ಮಾರಾಟ ಮಾಡುವ ಉದ್ದೇಶದಿಂದ ಮಾವಾ ತಯಾರಿಸುವ ವೇಳೆ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿಗೈದು 29,040 ರೂಪಾಯಿ ಮೌಲ್ಯದ ಮಾವಾ ಜಪ್ತಿಗೈದಿದ್ದಾರೆ. ಈ ಕುರಿತು ದೇವರಹಿಪ್ಪರಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.