ವಿಜಯಪುರ: ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಮಾಜಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಆನಂದಕುಮಾರ ದೇಸಾಯಿ ಆರೋಪಿದರು. ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯ ಹಾಗೂ ಅಪ್ರಮಾಣಿಕತೆಯಿಂದಾಗಿ ಓರ್ವ ಕಾರ್ಮಿಕನ ಸಾವು ಆಗಿದೆ. ಅಲ್ಲದೇ, ಬಾಯ್ಲರ್ ಖರೀದಿ ಟೆಂಡರ್ನಲ್ಲೂ ಗೋಲಮಾಲ್ ಆಗಿದೆ ಎಂದು ಹಾಲಿ ಆಡಳಿತ ಮಂಡಳಿಯ ವಿರುದ್ಧ ಕಿಡಿಕಾರಿದರು. ಇನ್ನೂ ಕಾನೂನು ಉಲ್ಲಂಘಿಸಿ ಟೆಂಡರ್ ಪ್ರಕ್ರಿಯೆ ಮಾಡಲಾಗಿದೆ. ರೈತರ ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡು ಅವ್ಯವಹಾರ ಮಾಡುತ್ತಿದ್ದ ಎಂದು ವಾಗ್ದಾಳಿ ಮಾಡಿದರು. ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ರೈತರ ಕಬ್ಬಿನ ಬಿಲ್ 15 ದಿನದ ಒಳಗೆ ನೀಡಬೇಕು. ಆದ್ರೀಗ್, ಎರಡು ತಿಂಗಳಾದ್ರೂ ಬಿಲ್ ನೀಡಿಲ್ಲ. ಇದರಿಂದ ರೈತರಿಗೆ ಅನ್ಯಾಯ ಆಗುತ್ತಿದೆ. ಅದಕ್ಕಾಗಿ ಆದಷ್ಟು ಬೇಗನೆ ಕಾರ್ಖಾನೆಯ ಹಾಲಿ ಅಧ್ಯಕ್ಷ, ವ್ಯವಸ್ಥಾಪಕರು ಹಾಗೂ ನಿರ್ದೇಶಕರ ಮೇಲೆ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.