ವಿಜಯಪುರ: ಅನಧಿಕೃತವಾಗಿ ವಿದ್ಯುತ್ ಬಳಕೆದಾರರಿಗೆ ಹೆಸ್ಕಾಂ ಅಧಿಕಾರಿಗಳು ಶಾಕ್ ನೀಡಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಾಂದಕವಟೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಎಇಇ
ಧರೆಪ್ಪಗೋಳ ನೇತೃತ್ವದ 24x7 ತಂಡ ಮನೆ ಮನೆಗೆ ತೆರಳಿ ಅಕ್ರಮ ವಿದ್ಯುತ್ ಬಳಕೆ ಮಾಡುವವರಿಗೆ ಶಾಕ್ ನೀಡಿದ್ದಾರೆ. ಕಳ್ಳ ದಾರಿಯಲ್ಲಿ ವಿದ್ಯುತ್ ವ್ಯಯ ಮಾಡುವ ಗ್ರಾಹಕರ ಮನೆಯಲ್ಲಿ ದಾಳಿಗೈದು ವಿದ್ಯುತ್ ಮೀಟರ್ಗೆ ಅಳವಡಿಕೆ ಮಾಡಿದ ವಸ್ತುಗಳನ್ನು ಜಪ್ತಿಗೈದಿದ್ದಾರೆ. 25 ರಿಂದ 30 ಮನೆಯಲ್ಲಿ ಬೈ ಪಾಸ ವಿದ್ಯುತ್ ಬಳಕೆ ಮಾಡುವವರ ಮನೆ ಗುರುತಿಸಿ ಅಂತಹ ಮನೆಗಳ ವಿದ್ಯುತ್ ತಂತಿ ಕಟ್ ಮಾಡಿ ತಂತಿ ಮತ್ತು ಹಲವಾರು ಎಲೆಕ್ಟ್ರಾನಿಕ್ ವಸ್ತುಗಳು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಎಸ್ಓ ಅಧಿಕಾರಿ ಬಸವರಾಜ ಅಗಸರ, ಪವರಮ್ಯಾನ ಬಿಲಾಲ್, ನಾಗೇಶ ರಾಠೋಡ ಮತ್ತು ಶಾಂತು ಪಾಟೀಲ ಭಾಗಿಯಾಗಿದ್ದರು.