ವಿಜಯಪುರ: ಲಕ್ಷಾಂತರ ಮೌಲ್ಯದ ಬೈಕ್ಗಳ್ಳತನ ಮಾಡಿರುವ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಗೋಲಗೇರಿ ನಾಕಾ ಬಳಿ ನಡೆದಿದೆ. ಇಮ್ರಾನ್ಪಟೇಲ ತಿಳಗೊಳ ಬಂಧಿತ ಆರೋಪಿ. ಇನ್ನೂ ಬಂಧಿತ ಆರೋಪಿಯಿಂದ 6.98 ಲಕ್ಷ ಮೌಲ್ಯದ 11 ವಿವಿಧ ಕಂಪನಿಯ ಬೈಕ್ಗಳನ್ನು ಪೊಲೀಸರು ಜಪ್ತಿಗೈದಿದ್ದಾರೆ. ಇನ್ನೂ ಗೊಲಗೇರಿ ನಾಕಾ ಬಳಿ ಅನುಮಾನಸ್ಪದ ರೀತಿಯಲ್ಲಿ ಬೈಕ್ನಲ್ಲಿ ಸಂಚರಿಸುವಾಗ ಪೊಲೀಸರು ದಾಳಿಗೈದಿದ್ದಾರೆ. ತದನಂತರ ತನಿಖೆ ವೇಳೆ ಮಾಹಿತಿ ಲಭ್ಯವಾಗಿದೆ. ಈ ಕುರಿತು ಸಿಂದಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.