ಬೆಳಗಾವಿ: ಅಕ್ರಮವಾಗಿ ಗೋವಾ ಟೂ ಬೆಳಗಾವಿಗೆ ಮದ್ಯ ಸಾಗಾಟ ವೇಳೆ ಪೊಲೀಸರು ದಾಳಿಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮೋದೆಕೊಪ್ಪ ಕ್ರಾಸ್ ಬಳಿ ನಡೆದಿದೆ. ಓರ್ವ ಆರೋಪಿ ಹಾಗೂ ವಾಹನ ಸಮೇತ ಮದ್ಯ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ವಾಹನ, 3905.28 ಲೀಟರ್ ಮದ್ಯ ಸೇರಿ 67.73 ಲಕ್ಷ ಮೌಲ್ಯದ ವಸ್ತುಗಳು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಖಾನಾಪುರ ಅಬಕಾರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿಯಲ್ಲಿ ಅಬಕಾರಿ ನಿರೀಕ್ಷಕರಾದ ದಾವಲಸಾಬ್ ಶಿಂಧೋಗಿ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.