ವಿಜಯಪುರ: ಬ್ಯಾಂಕ್ನಲ್ಲಿ ಹಣ ಡ್ರಾ ಮಾಡಿಕೊಂಡು ಹೋಗುತ್ತಿದ್ದ ವ್ಯಕ್ತಿ ಬಳಿಯ ಐದು ಲಕ್ಷ ಹಣ ದೋಚಿಕೊಂಡು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ವಿಜಯಪುರದ ತಾಜಬಾವಡಿಯಲ್ಲಿ ನಡೆದಿದೆ.
ಜಾಲಗೇರಿ ತಾಂಡಾ ಒಂದರ ರಾಜು ರಾಠೋಡ ಬಳಿಯ ಐದು ಲಕ್ಷ ಹಣ ದೋಚಿಕೊಂಡು ದುಷ್ಕರ್ಮಿಗಳು ಕಾಲ್ಕಿತ್ತಿದ್ದಾರೆ. ಇನ್ನು ರಾಜು ರಾಠೋಡ ನಗರದ ಬಿಎಲ್ಡಿಈ ಹತ್ತಿರದ ಎಸ್ಬಿಐ ಬ್ಯಾಂಕ್ನಲ್ಲಿ ಹಣ ಡ್ರಾ ಮಾಡಿಕೊಂಡಿದ್ದಾನೆ. ಬಳಿಕ ಆತನಲ್ಲಿದ್ದ ಹಣ ಎಗ್ಗರಿಸಿಕೊಂಡು ರಾಜುನ್ನು ತಾಜಬಾವಡಿ ಬಳಿ ಬಿಟ್ಟು ಹೋಗಿದ್ದಾರೆ. ಅದಕ್ಕಾಗಿ ಹಣ ಕಳೆದುಕೊಂಡಿರುವ ರಾಜು ಕಣ್ಣೀರು ಹಾಕುತ್ತಿದ್ದಾನೆ. ಕಬ್ಬು ಕಟಾವ್ ಮಾಡುವವರಿಗೆ ಹಣ ನೀಡಲು ಹಣ ತೆಗೆದುಕೊಂಡು ಹೋಗುವಾಗ ಈ ಅವಘಡ ನಡೆದಿದೆ. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.