ವಿಜಯಪುರದಲ್ಲಿ “ಚಿನ್ನದ” ಮನೆಗಳ್ಳರು ಬಂಧನ

Karnataka 1 News
ವಿಜಯಪುರದಲ್ಲಿ “ಚಿನ್ನದ” ಮನೆಗಳ್ಳರು ಬಂಧನ

ವಿಜಯಪುರ: ವಿಜಯಪುರ, ಬೆಳಗಾವಿ, ಬಾಗಲಕೋಟೆ‌ ಜಿಲ್ಲೆಯಲ್ಲಿ ಮನೆಗಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸ ಬಂಧಿಸಿರುವ ಘಟನೆ ವಿಜಯಪುರ ನಗರದ ಹೌಸಿಂಗ್ ಬೋರ್ಡ್ ಬಳಿ‌ ನಡೆದಿದೆ. ವಿಜಯಪುರ ನಗರದ ನಿವಾಸಿಗಳಾದ ಸಮೀರ ನಬಿಲಾಲ ಇನಾಮದಾರ 23, ಹಸನಡೊಂಗ್ರಿ ಚಾಂದಸಾಬ ಮುಲ್ಲಾ 33, ಶಪೀಕ್ ಅಹ್ಮದ ಮಹ್ಮದಗೌಸ ಇನಾಮದಾರ 49 ಬಂಧಿತರು.‌
ಸದರಿ ಆರೋಪಿತರ ಕಡೆಯಿಂದ ಜಲನಗರ ಪಿಎಸ್ ಗುನ್ನೆ ನಂ: 90/2025 ಕಲಂ 331(3), 305 ಬಿಎನ್‌ಎಸ್-2023 ನೇ ಪ್ರಕರಣಕ್ಕೆ ಸಂಬಂಧಿಸಿದ ಒಟ್ಟು 65 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಒಂದು ಬಜಾಜ ಕಂಪನಿಯ ಅಟೋ ರೀಕ್ಷಾ ಹಾಗೂ ಒಂದು ಕಬ್ಬಿಣದ ರಾಡ ಹೀಗೆ ಒಟ್ಟು 8,37,000/- ರೂ ಮೌಲ್ಯವನ್ನು ಆರೋಪಿತರಿಂದ ಜಪ್ತಿ ಮಾಡಿದ್ದಾರೆ. ಎಸ್ಪಿ ಲಕ್ಷ್ಮಣ ನಿಂಬರಗಿ ಆದೇಶದ ಮೇರೆಗೆ ಪೊಲೀಸರು ನೆರೆಯ ಜಿಲ್ಲೆಗಳಾದ ಬಾಗಲಕೋಟ, ಬೆಳಗಾವಿ ಕಡೆಗಳಲ್ಲಿ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಆರೋಪಿತರ ತಪಾಸಣೆಯಲ್ಲಿದ್ದಾಗ ಇಬ್ಬರು ಆರೋಪಿತರನ್ನು ವಿಜಯಪುರ ಶಹರ ಹೌಸಿಂಗ್ ಬೋರ್ಡ ಕಡೆಗೆ ಅನುಮಾನಾಸ್ಪದವಾಗಿ ಅಟೋದಲ್ಲಿ ತಿರುಗಾಡುವಾಗ ಹಿಡಿದು ಠಾಣೆಗೆ ಕರೆತಂದು ವಿಚಾರಣೆ ಮಾಡಲಾಗಿ ಒಟ್ಟು ಮೂರು ಜನರು ಸೇರಿಕೊಂಡು ಮನೆಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು, ಇಬ್ಬರನ್ನೂ ದಸ್ತಗೀರ ಮಾಡಿ ಮಾನ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ನಂತರ ಸದರ ಪ್ರಕರಣದಲ್ಲಿನ ಮತ್ತೊಬ್ಬ ಆರೋಪಿತನನ್ನು ಕನಕದಾಸ ಬಡಾವಣೆಯಲ್ಲಿ ತಿರುಗಾಡುವಾಗ ಬಂಧಿಸಿ ಮಾನ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸದರಿ ಪ್ರಕರಣದ ಆರೋಪಿತರನ್ನು ಪತ್ತೆ ಹಚ್ಚಿ ಬಂಧಿಸಿದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗಳ ಕರ್ತವ್ಯವನ್ನು ಎಸ್ಪಿ ನಿಂಬರಗಿ ಶ್ಲಾಘಿಸಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";