ಕೃಷ್ಣಾ ಮೆಲ್ದಂಡೆ ಯೋಜನೆಯ ಮೂರನೇಯ ಹಂತದ ರೈತರಿಗೆ ಪರಿಹಾರಕ್ಕಾಗಿ ಪ್ರತಿಭಟನೆ

Karnataka 1 News
ಕೃಷ್ಣಾ ಮೆಲ್ದಂಡೆ ಯೋಜನೆಯ ಮೂರನೇಯ ಹಂತದ ರೈತರಿಗೆ ಪರಿಹಾರಕ್ಕಾಗಿ ಪ್ರತಿಭಟನೆ

ವಿಜಯಪುರ ಜಿಲ್ಲೆಯ ಆಲಮಟ್ಟಿ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದಲ್ಲಿ ಮುಳಗಡೆ ಹಾಗೂ ಕಾಮಗಾರಿಗೆ ವಿಜಯಪುರ-ಬಾಗಲಕೋಟೆ ಜಿಲ್ಲೆಗಳ 1.30 ಲಕ್ಷ ಎಕರೆ ಭೂಮಿಗೆ ಸಂತ್ರಸ್ತರ ಬೇಡಿಕೆಯಂತೆ 1 ಎಕರೆ ನೀರಾವರಿ ಭೂಮಿಗೆ ₹55 ಲಕ್ಷ, ಒಣ ಬೇಸಾಯಕ್ಕೆ 1 ಎಕರೆಗೆ ₹45 ಲಕ್ಷ ಗಳಂತೆ ಬೆಲೆ ನಿಗದಿ ಮಾಡಿ ಪರಿಹಾರ ನೀಡಬೇಕು ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಆಗ್ರಹಿಸಿದರು.
ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿನ ಪ್ರವಾಸಿ ಮಂದಿರದ ಎದುರು ರಸ್ತೆ ರೋಖೋ ನಡೆಸಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು.

 

ಹಿನ್ನೀರಿನಲ್ಲಿ ಮುಳಗಡೆಯಾಗಲಿರುವ ಮತ್ತು ಕಾಲುವೆಗಳಿಗಾಗಿ ಭೂ-ಸ್ವಾದೀನ ಮಾಡಿಕೊಂಡಿರುವ ಜಮಿನಗಳಿಗೆ ರೈತರ ಬೇಡಿಕೆಯಂತೆ ಸಚಿವ ಸಂಪುಟ ಸಭೆಯಲ್ಲಿ ಜಮೀನುಗಳಿಗೆ ರೈತರ ಬೇಡಿಕೆಯಂತೆ ಬೆಲೆ ನಿಗದಿ ಮಾಡಬೇಕು.‌ ಆಲಮಟ್ಟಿ ಜಲಾಶಯದಲ್ಲಿ ಮುಳಗಡೆಯಾದ ಟಕ್ಕಳಕಿ ಗ್ರಾಮಕ್ಕೆ ಹಾಕಿದ 3 ಷರತ್ತು ಸಡಿಲಗೊಳಿಸಿ ಎಲ್ಲಾ ಸಂತ್ರಸ್ತರಂತೆ ಪರಿಹಾರ ನೀಡಲಾಗಿದೆ. ಆದರೆ ಕೊಲ್ಹಾರದ 1498 ಮನೆಗಳಿಗೆ ಹಾಕಿದ 3 ಷರತ್ತುಗಳ ಪೈಕಿ 2 ಷರತ್ತು ತೆಗೆದು ಹಾಕಲಾಗಿದೆ. 3ನೇ ಷರತ್ತು ಹೆಚ್ಚುವರಿ ಪರಿಹಾರಕೆ ನ್ಯಾಯಾಲಯಕ್ಕೆ ಹೋಗಬಾರದು ಎನ್ನುವ ಕರಾರು ಮಾತ್ರ ಬಾಕಿ ಇದೆ. 1498 ಮನೆ ಮಾಲೀಕರಿಗೆ ಇಡೀ ಆಲಮಟ್ಟಿ ಯೋಜನೆ ಅಡಿಯಲ್ಲಿ ಕೊಲ್ಹಾರಕ್ಕೆ ಮಾತ್ರ ಅನ್ಯಾಯವಾಗಿದ್ದು, ಹೆಚ್ಚುವರಿ ಪರಿಹಾರ ನೀಡಿ ಸರಿಪಡಿಸಬೇಕು ಎಂದು ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಹೇಳಿದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";