ವಿಜಯಪುರ: ವಿಜಯಪುರದ ನಾಗಠಾಣ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಬಾಕಿ ಹಿನ್ನೆಲೆ ಕಾರಜೋಳಗೆ ಟಿಕೆಟ್ ಘೋಷಿಸುವಂತೆ ಬೆಂಬಲಿಗರು ಆಗ್ರಹಿಸಿ ವಿಜಯಪುರ ನಗರದ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು. ಕಚೇರಿ ಮುಂದೆ ಧರಣಿ ಕುಳಿತ ಬಿಜೆಪಿ ವಿರುದ್ಧ ಬೆಂಬಲಿಗರು ಕಿಡಿಕಾರಿದರು. ನೂರಾರು ಕಾರ್ಯಕರ್ತರು, ಬೆಂಬಲಿಗರಿಂದ ಮುತ್ತಿಗೆ ಹಾಕಿ
ನೀರಾವರಿ ಸಚಿವ ಗೋವಿಂದ ಕಾರಜೋಳ ಪುತ್ರ ಗೋಪಾಲ ಕಾರಜೋಳರಿಗೆ ಟಿಕೆಟ್ ಕೊಡಬೇಕು ಎಂದು ಒತ್ತಾಯಿಸಿದರು.