ವಿಜಯಪುರ: ಸಿಡಿಲು ಬಡಿದು 12 ಕುರಿಗಳ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದಲ್ಲಿ ನಡೆದಿದೆ. ಮಲಕಪ್ಪ ಸಾಸನೂರ ಹಾಗೂ ಮಾಳಪ್ಪ ತಳಗೇರಿಗೆ ಸೇರಿದ ಕುರಿಗಳು ಅಸುನೀಗಿದ್ದಾವೆ. ಆರ್ಭಟಿಸಿದ ಮಳೆಯ ವೇಳೆ ಸಿಡಿಲು ಬಡಿದು ಕುರಿಗಳು ಸಾವನ್ನಪ್ಪಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.