ವಿಜಯಪುರ: ಅತಿಕ್ರಮಣ ಮಾಡಿಕೊಂಡಿರುವ ಮನೆಗಳ ತೆರವು ಕಾರ್ಯಾಚರಣೆಯನ್ನು ಜಿಲ್ಲಾಡಳಿತ, ಮಹಾನಗರ ಪಾಲಿಕೆಯಿಂದ ವಿಜಯಪುರದ ಡಂಬಳ ಅಗಸಿ ಬಳಿ ನಡೆಸಿದರು.
ಮನೆಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿದರು. ಇನ್ನು ಅತಿಕ್ರಮಣ ತೆರವು ಮಾಡುವಂತೆ ಮಹಾನಗರ ಪಾಲಿಕೆಯಿಂದ ನೋಟೀಸ್ ಜಾರಿ ಮಾಡಲಾಗಿತ್ತು. ಅಲ್ಲದೇ, ಕಟ್ಟಿದ ಮನೆಗಳನ್ನು ತೆರವು ಮಾಡಿದಕ್ಕೆ ಮನೆ ಕಳೆದುಕೊಂಡವರ ಕಣ್ಣೀರು ಹಾಕಿದರು.
ಅಲ್ಲದೇ, ನೂತನವಾಗಿ 560 ಮನೆಗಳನ್ನು ಕಟ್ಟುವ ಸಲುವಾಗಿ ಮನೆಗಳ ತೆರವು ಮಾಡಲಾಗಿದೆ ಎಂದು ಸ್ಲಂ ಬೋರ್ಡ್ ಡೆವಲಪ್ಮೆಂಟ್ ಅಧಿಕಾರಿ ಬಸವರಾಜ್ ಮಾಹಿತಿ ನೀಡಿದರು. ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಭದ್ರತೆ ನೀಡಲಾಗಿತ್ತು.