ಬೆಳಗಾವಿ: ಖಾನಾಪೂರ ತಾಲೂಕಿನ ಸುರಾಪೂರ ಗ್ರಾಮದ ಯಲ್ಲಪ್ಪ ಕೋಲಕಾರಗೆ ಬಿಎಸ್ಪಿ ಪಕ್ಷದಿಂದ ಟಿಕೆಟ್ ನೀಡುವುದಾಗಿ ನಿಶ್ಚಯವಾಗಿತ್ತು. ಆದರೆ ಕೊನೆಯ ಹಂತದಲ್ಲಿ ಪಕ್ಷದ ಮುಖಂಡರಿಂದ ಟಿಕೆಟ್ ಕೈತಪ್ಪಿದ್ದಕ್ಕೆ ತಾಲೂಖಿನ ಬಿಎಸ್ಪಿ ಕಾರ್ಯಕರ್ತರು ಅಸಮಾಧಾನಗೊಂಡು ಪಕ್ಷದ ವಿರುದ್ದ ರೊಚ್ಚಿಗೆದ್ದಿದ್ದಾರೆ.
ಬಿಎಸ್ಪಿ ಪಕ್ಷವು ಟಿಕೆಟ್ ನೀಡುವುದಾಗಿ ಘೋಷಿಸಿ ಕೊನೆಯ ಹಂತದಲ್ಲಿ ಟಿಕೆಟ್ ನೀಡದಿರುವುದು ಪಕ್ಷದ ಸಿದ್ದಾಂತಗಳನ್ನ ಗಾಳಿಗೆ ತೂರಿ ಪಕ್ಷವು ಕಾಂಗ್ರೆಸ್ ಬಿ ಟೀಂ ಆಗಿ ಕೆಲಸ ಮಾಡಿ ನಮಗೆ ಟಿಕೆಟ್ ನೀಡುವಲ್ಲಿ ಮೋಸ ಮಾಡಿದೆ ಎಂದು ತಾಲೂಕಿನ ಬಿಎಸ್ಪಿ ಕಾರ್ಯಕರ್ತರು ಆರೋಪಿಸಿದರು. ಈಗಾಗಲೇ ಯಲ್ಲಪ್ಪ ಕೋಲಕಾರರಿಗೆ ಬೆಂಬಲ ನೀಡಿ ಪಕ್ಷೇತರನಾಗಿ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷೇತರನಾಗಿ ನಾಮಪತ್ರ ಸಲ್ಲಿಸಿದ ಯಲ್ಲಪ್ಪ ಕೋಲಕಾರ ಮಾತನಾಡಿ, ನನಗೆ ಬಿಎಸ್ಪಿ ಪಕ್ಷದಿಂದ ಮೋಸವಾಗಿದ್ದು ಹೀಗಾಗಿ ನಾನು ಪಕ್ಷೇತರನಾಗಿ ಚುಣಾವಣೆಯಲ್ಲಿ ಸ್ಪರ್ದಿಸುತ್ತಿದ್ದೇನೆ. ತಾಲೂಕಿನಲ್ಲಿ ಹಲವಾರು ಬಡಜನರ ಕಷ್ಟಕ್ಕೆ ಸ್ಪಂದಿಸಲು ನಾನು ಈ ನಿರ್ದಾರ ಕೈಗೊಂಡಿದ್ದೇನೆ. ಬಿಎಸ್ಪಿ ಪಕ್ಷ ನನಗೆ ಮೋಸ ಮಾಡಿದ್ರು ಅವರ ಕಾರ್ಯಕರ್ತರೆಲ್ಲ ನನ್ನೊಂದಿಗೆ ಇದ್ದಾರೆ ಎಂದರು.