ವಿಜಯಪುರ: ಕಳೆದ ರಾತ್ರಿ ಸುರಿದ ಬಾರಿ ಮಳೆ, ಗಾಳಿಗೆ ಬಾಳೆ ಹಣ್ಣಿನ ಗಿಡಗಳು ನೆಲಕ್ಕೆ ಉರುಳಿ ಬಿದ್ದಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಪಟ್ಟಣದಲ್ಲಿ ನಡೆದಿದೆ. ರೇವಣಶಿದಪ್ಪ ಕೆಂಬಾವಿ ಎಂಬುವರಿಗೆ ಸೇರಿದ 1 ಎಕರೆ ಬಾಳೆ ತೋಟದಲ್ಲಿನ 1500 ಗಿಡಗಳ ಪೈಕಿ 700 ಗಿಡಗಳು ನೆಲಸಮ ಆಗಿವೆ. ಇದರಿಂದ ಕೈಗೆ ಬಂದ ಅಂತಹ ತುತ್ತು ಬಾಯಿಗೆ ಬರದಂತಹ ಪರಿಸ್ಥಿತಿ ಆಗಿದೆ. ಅದಕ್ಕಾಗಿ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಮತ್ತೊಂದೆಡೆ ಪಟ್ಟಣದ ಪೆಟ್ರೋಲ್ ಬಂಕ್ ಹಿಂದಿನ ಬಾಳೆ ತೋಟದಲ್ಲಿ ಸಿದ್ದಣ್ಣ ಮನ್ಮಂಥನಾಳ ಇವರ ಹೊಲದಲ್ಲಿ 1 ಎಕರೆ ಬಾಳೆ ಬೆಳೆದಿದ್ದು, ಇದರಲ್ಲಿ 300 ಗಿಡಗಳು ಬಾರಿ ಗಾಳಿ ಮಳೆಗೆ ಬಾಳೆ ಗಿಡಗಳು ನೆಲಕ್ಕೆ ಬಿದ್ದಿವೆ.