ವಿಜಯಪುರ: ಸಿಂದಗಿಯಲ್ಲಿ ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಚಿಕ್ಕ ಸಿಂದಗಿ ಬೈಪಾಸ್ ಬಳಿ ನಡೆದಿದೆ. ಅಣ್ಣಪ್ಪ ಜೇರಟಗಿ, ಸಿದ್ರಾಮ ಪಾಟೀಲ ಬಂಧಿತ ಆರೋಪಿಗಳು. ಇನ್ನೂ ಸಿಂದಗಿಯ ಸುತ್ತಮುತ್ತಲಿನ ಕಡೆಗೆ ಮನೆಗಳ್ಳತನ ಮಾಡುತ್ತಿದ್ದರು. 5.51 ಲಕ್ಷ ಮೌಲ್ಯದ 141.379 ಗ್ರಾಂ ಚಿನ್ನ ಜಪ್ತಿಗೈದಿದ್ದಾರೆ. ಈ ಕುರಿತು ಸಿಂದಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.