ವಿಜಯಪುರ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುವ ವೇಳೆಯಲ್ಲಿ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರೇರೂಗಿಯಲ್ಲಿ ನಡೆದಿದೆ. ಹಣಮಂತ ದುಂಡಪ್ಪ ಅಗಸರ, ಶಿವಪ್ಪ ಮಲ್ಲಪ್ಪ ಮಿರಗಿ ಬಂಧಿತ ಆರೋಪಿಗಳು. ಇನ್ನು ಜಮೀನಿನಲ್ಲಿ ಒಣ ಗಾಂಜಾ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುವ ಸಂದರ್ಭದಲ್ಲಿ ಪೊಲೀಸರು ದಾಳಿಗೈದು 75 ಸಾವಿರ ಮೌಲ್ಯದ 7 ಕೆಜಿ 710 ಗ್ರಾಂ ಗಾಂಜಾ ಜಪ್ತಿಗೈದಿದ್ದಾರೆ. ಈ ಕುರಿತು ಇಂಡಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.