ವಿಜಯಪುರ: ಜಿಲ್ಲಾ ತಳವಾರ ಸಮಾಜದ ಹಿರಿಯ ಮುಖಂಡ ಶರಣಪ್ಪ ಕಣಮೇಶ್ಚರ (58) ನಿಧನರಾಗಿದ್ದಾರೆ. ಹೃದಯಾಘಾತದಿಂದ ಶರಣಪ್ಪ ಕಣಮೇಶ್ವರ ನಿಧನರಾದರು. ವಿಜಯಪುರ ಜಿಲ್ಲೆ ಆಲಮೇಲ ತಾಲೂಕಿನ ದೇವಣಗಾಂವ್ ಗ್ರಾಮದಿಂದ ಆಸ್ಪತ್ರೆಗೆ ಹೋಗುವ ವೇಳೆ ಅಸುನೀಗಿದ್ದಾರೆ. ಶರಣಪ್ಪ ಕಣಮೇಶ್ವರ ನಿಧನಕ್ಕೆ ತಳವಾರ ಸಮುದಾಯದ ಮುಖಂಡರ ಹಾಗೂ ವಿವಿಧ ಮಠಾಧೀಶರ ಸಂತಾಪ ಸೂಚಿಸಿದ್ದಾರೆ.