ಧಾರವಾಡ: ಕಾಂಗ್ರೆಸ್ ಪಕ್ಷದಿಂದ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ವಿನಯ್ ಕುಲಕರ್ಣಿ ಟಿಕೆಟ್ ಘೋಷಣೆ ಹಿನ್ನೆಲೆ ತಾಲೂಕಿನ ಶಿವಳ್ಳಿಯ ಗ್ರಾಮದೇವಿ ದುರ್ಗಾದೇವಿಗೆ ಪೂಜೆ ಸಲ್ಲಿಸಿ,ವಿನಯ ಕುಲಕರ್ಣಿಯವರ ಅನುಪಸ್ಥತಿಯಲ್ಲಿ ಚುನಾವಣಾ ಪ್ರಚಾರಕ್ಕೆ ಶಿವಲೀಲಾ ವಿನಯ ಕುಲಕರ್ಣಿ ಚಾಲನೆ ನೀಡಿದರು.
ಮನೆ ಮನೆಗೆ ತೆರಳಿ ವಿನಯ ಕುಲಕರ್ಣಿಯವರ ಪರವಾಗಿ ಸಹಕಾರ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಿವಲೀಲಾ ಕುಲಕರ್ಣಿ, ವಿನಯ ಕುಲಕರ್ಣಿಯವರ ಜನಪ್ರೀಯತೆಯನ್ನು ಸಹಿಸಲಾರದ ಕುತಂತ್ರಿಗಳು,ಷಡ್ಯಂತ್ರ ಮಾಡಿ ಅವರಿಗೆ ಧಾರವಾಡಕ್ಕೆ ಬರದ ಹಾಗೇ ನಿರಂತರ ಪ್ರಯತ್ನ ಮಾಡುತ್ತಿದ್ದು,ತಾವೆಲ್ಲಾ ಕಾರ್ಯಕರ್ತರು ಒಬ್ಬೊಬ್ಬ ಕಾರ್ಯಕರ್ತ ವಿನಯ ಕುಲಕರ್ಣಿಯಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ನಮ್ಮ ಗೆಲುವು ನಿಶ್ಚಿತವಾಗಿದ್ದು,ತಾವೆಲ್ಲ ಶ್ರಮ ವಹಿಸಿ ದುಡಿಯಬೇಕು ನೀವೆ ನಮ್ಮ ಶಕ್ತಿ ಎಂದರು. ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಶಿವಳ್ಳಿ,ಅರವಿಂದ ಏಗನಗೌಡರ ಮುಖಂಡರುಗಳಾದ ಪರಮೇಶ್ವರ ಕಾಳೆ,ಅಣ್ಣಪ್ಪ ಚಿನಗುಡಿ,ಶಿವಾನಂದ ಲಂಬಿ,ಸಿದ್ದು ಮುಳ್ಳೂರ,ಫಿರೋಜ ನಾಯ್ಕರ,ಶಿವಪ್ಪ ತಳವಾರ,ಪಾರೂಕ ಜಮಾದಾರ,ಶಂಕರವ್ವ ಮಲ್ಲಿಗವಾಡ,ಜಯಪ್ಪ ಮುದ್ದಿ,ಮಂಜು ಸುಳ್ಳದ, ಮುಂತಾದವರು ಉಪಸ್ಥಿತರಿದ್ದರು.