ವಿಜಯಪುರ: ಬೀಗ ಹಾಕಿದ್ದ ಮನೆಯ ಕಿಟಕಿ ಮುರಿದು ಕಳ್ಳತನಗೈದು ಕಳ್ಳರು ಪರಾರಿಯಾಗಿರುವ ಘಟನೆ ವಿಜಯಪುರ ನಗರದ ವಜ್ರ ಹನುಮಾನ ದೇವಸ್ಥಾನದ ಬಳಿ ನಡೆದಿದೆ. ಕಿಟಕಿ ಕಟ್ ಮಾಡಿ ಮನೆಯಲ್ಲಿದ್ದ 70 ಗ್ರಾಂ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣ ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಪ್ರೇಮಿಳಾ ಅರಮನೆ ಎಂಬುವವರಿಗೆ ಸೇರಿದ ಮನೆಯಲ್ಲಿ ಕಳ್ಳತನ ಆಗಿದೆ. ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.