ವಿಜಯಪುರ: ನಗರ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳರ ನಗರದ ಗುರುಕುಲ ರಸ್ತೆಯಲ್ಲಿರುವ ಯುನಿಯನ್ ಬ್ಯಾಂಕ್ ಪಕ್ಕದಲ್ಲಿ ತೆರೆಯಲಾದ ಪ್ರಚಾರ ಕಾರ್ಯಾಲಯದ ಉದ್ಘಾಟನೆ ಸಮಾರಂಭ ನಾಳೆ (ಏ.13 ರಂದು) ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ. ಕಾರ್ಯಾಲಯ ಉದ್ಘಾಟನೆ ಬಳಿಕ ಮುಖಂಡರ ಜೊತೆಗೆ ಚರ್ಚಿಸಿ, ನಾಮಪತ್ರ ಸಲ್ಲಿಕೆಯ ದಿನಾಂಕ ಹಾಗೂ ಸಮಯ ನಿಗದಿಪಡಿಸಲಾಗುವುದು ಎಂದು ಶಾಸಕ ಯತ್ನಾಳ ಕಚೇರಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.