ಬೆಳಗಾವಿ: ಖಾನಾಪೂರ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಚುಣಾವಣೆ ಕಾವು ಎರುತ್ತಿದ್ದು ಬಂಡಾಯದ ಗಾಳಿಯು ಕೂಡಾ ಜೋರಾಗಿ ಬಿಸುತ್ತಿದೆ. ಇಂದು ತಾಲೂಕಿನ ಕಾಂಗ್ರೆಸ್ ಪಕ್ಷದ ಕಟ್ಟಾ ಕಾರ್ಯಕರ್ತರಾದ ಇರ್ಫಾನ್ ತಾಳಿಕೋಟಿ ಕಾಂಗ್ರೆಸ್ ಪಕ್ಷದ ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡು ಅಭಿಮಾನಿಗಳ ಒತ್ತಾಯದಿಂದ ಬಂಡಾಯ ಅಭ್ಯರ್ಥಿಯಾಗಿ ಎಪ್ರಿಲ್ 20 ರಂದು ನಾಮಪತ್ರ ಸಲ್ಲಿಸುವದಾಗಿ ಮಾಹಿತಿ ತಿಳಿಸಿದರು. ಅದೆ ರೀತಿ ಪಟ್ಟಣದಲ್ಲಿ ಇಂದು ಒಂದು ಕಛೇರಿಯನ್ನು ಪ್ರಾರಂಭ ಮಾಡಿದರು. ಈ ಸಂಧರ್ಭದಲ್ಲಿ ತಾಲೂಕಿನ ಹಲವಾರು ಅಬಿಮಾನಿಗಳು ಉಪಸ್ಥಿತರಿದ್ದು, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.