ವಿಜಯಪುರ: ಹಿಂದೂ ಹುಲಿ ಖ್ಯಾತಿಯ ವಿಜಯಪುರ ನಗರ ಮತಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ಟಕ್ಕರ್ ನೀಡಲು ಕಾಂಗ್ರೆಸ್ ಅಭ್ಯರ್ಥಿ ಮುಶ್ರಿಫ್ ಹಾಗೂ ಜೆಡಿಎಸ್ ಅಭ್ಯರ್ಥಿ ಬಂದೇನವಾಜ ಮಹಾಬರಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಹೌದು..! ಇಷ್ಟು ದಿನ ತ್ರಿಕೋನ ಸ್ಪರ್ಧೆ ಎಂಬು ಬಿಂಬಿತವಾಗಿದ್ದ ವಿಜಯಪುರ ನಗರ ಮತಕ್ಷೇತ್ರದಲ್ಲಿ ಇದೀಗ್ ಕಾಂಗ್ರೆಸ್ ವರ್ಸ್ಸ್ ಶಾಸಕ ಯತ್ನಾಳ ಮಧ್ಯೆ ನೇರ ಫೈಟ್ ಆರಂಭವಾಗಿದೆ.
ನಾನು ಕಣದಿಂದ ಹಿಂದಕ್ಕೆ ಸರಿಯುತ್ತಿದ್ದೇನೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸಲ್ಲ, ಸೈಲೆಂಟ್ ಆಗಿರುವೆ. ನಗರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಸಂಘಟನೆ ಇಲ್ಲ, ಕಾರ್ಯಕರ್ತರ ಪಡೆ ಇಲ್ಲ.
ಎರಡು ದಿನ ಪ್ರಚಾರ ನಡೆಸಿದಾಗ ಯಾವುದೇ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ. ಹೀಗಾಗಿ ಕಣದಿಂದ ಹಿಂದಕ್ಕೆ ಸರಿದಿದ್ದೇನೆ. ಅಲ್ಲದೇ, ನನ್ನ ಮೇಲೆ ಯಾವುದೇ ಒತ್ತಡವಿಲ್ಲ, ಸ್ವಯಂ ಪ್ರೇರಣೆಯಿಂದ ಕಣದಿಂದಕ್ಕೆ ಹಿಂದಕ್ಕೆ ಬಂದಿದ್ದೇನೆ. ಹಿಂದೆ ಯತ್ನಾಳ್ ಜೆಡಿಎಸ್ ಪಕ್ಷ ಸೇರಿ ಸಂಘಟನೆಯನ್ನ ಹಾಳು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.