ವಿಜಯಪುರ: ನಗರ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಂದೇನವಾಜ ಮಹಾಬರಿ ಕಾಂಗ್ರೆಸ್ನೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಹಿಂದೂ ಮುಖಂಡ ರಾಘವ ಅಣ್ಣಿಗೇರಿ ಆರೋಪಿಸಿದರು. ವಿಜಯಪುರ ನಗರದಲ್ಲಿ ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಧಿಕೃತವಾಗಿ ಚುನಾವಣೆ ಕಣದಿಂದ ಜೆಡಿಎಸ್ ಅಭ್ಯರ್ಥಿ ಮಹಾಬರಿ ಹಿಂದೆ ಬಂದಿದ್ದಾರೆ. ಇದರ ಹಿಂದೆ ಕಾಂಗ್ರೆಸ್, ಜೆಡಿಎಸ್ ಒಳ ಒಪ್ಪಂದ ಇದೆ. ಇದು ಜೆಡಿಎಸ್ ಅಭ್ಯರ್ಥಿ ಮಹಾಬರಿಗೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದರು. ಕಾಂಗ್ರೆಸ್, ಜೆಡಿಎಸ್ ಸೇರಿಕೊಂಡು ಗದ್ದಲ, ಗೂಂಡಾಗಿರಿ ಮಾಡಲು ಹೊರಟಿದ್ದಾರೆ. ಅಲ್ಲದೇ, ಜೆಡಿಎಸ್, ಕಾಂಗ್ರೆಸ್ ಅನೈತಿಕ ಬೆಂಬಲ ನೀಡಿದ್ದಾರೆ. ಇದಕ್ಕೆ ರಾಜ್ಯದ ಎದುರು ಉತ್ತರ ನೀಡಬೇಕು ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿಗೆ ಟಾಂಗ್ ನೀಡಿದರು. ಜೆಡಿಎಸ್, ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖವಾಗಿವೆ. ಸುರಕ್ಷತೆ, ಹಿಂದೂತ್ವ ಮೇಲೆ ವಿಜಯಪುರ ನಗರ ಮತಕ್ಷೇತ್ರದ ಚುನಾವಣೆ ಆಗುತ್ತದೆ. ಪಾರದರ್ಶಕವಾಗಿ ಪೊಲೀಸ ಇಲಾಖೆ, ಚುನಾವಣಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನು ನಾನು ಸ್ವಾಗತಿಸುತ್ತೇನೆ. ಕಳೆದ ಚುನಾವಣೆಯಲ್ಲಿ ಹಿಂದೂತ್ವ ಏರಿಯಾದಲ್ಲಿ ಕಾಂಗ್ರೆಸ್ ನವರು ದಾಂಧಲೆ ಮಾಡಿದ್ದಾರೆ. ಇದು ಖಂಡನೀಯ. ಅದಕ್ಕಾಗಿ ಈ ಸಲ ಅಂತಹ ಘಟನೆಗಳು ಆಗದಂತೆ ಪೊಲೀಸರು ಹದ್ದಿನ ಕಣ್ಣು ಇಡಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ಗೆ ಬೆಂಬಲ ನೀಡಿರುವ ಜೆಡಿಎಸ್ ಅಭ್ಯರ್ಥಿ ಬಂದೇನವಾಜ ಮೇಲೆ ಗೂಂಡಾ ಕಾಯ್ದೆ ಹಾಕಬೇಕು ಎಂದು ಎಸ್ಪಿಗೆ ಮನವಿ ಮಾಡಿದರು.
ಶಾಸಕ ಸತೀಶ ಜಾರಕಿಹೊಳಿ ವಿರುದ್ಧ ಅಣ್ಣಿಗೇರಿ ಕಿಡಿಕಾರಿದ್ದು, ಹಿಂದೂ ಅಂದ್ರೆ ಅಶ್ಲೀಲ ಎಂದಿದ್ದ ಸತೀಶ್ ವಿರುದ್ಧ ವಾಗ್ದಾಳಿ ನಡೆಸಿ, ಕಾಣದ ಕೈಗಳದಂತೆ ನಗರಕ್ಕೆ ಆಗಮಿಸಿ ಕೆಲಸ ಮಾಡುತ್ತಿದ್ದಾರೆ. ನಿಮ್ಮ ವರ್ಕ್ಔಟ್ ನಡೆಯಲ್ಲ. ಯಾಕೆಂದ್ರೇ ನಗರದಾದ್ಯಂತ ಎಲ್ಲ ಸಮಾಜದ ಮುಖಂಡರು ಶಾಸಕ ಯತ್ನಾಳ ಪರವಾಗಿ ಇದ್ದಾರೆ ಎಂದರು. ಕಳೆದ ಬಾರಿಯ ಮೂರು ಪಟ್ಟು ಹೆಚ್ಚಿನ ಮತಗಳಿಂದ ಯತ್ನಾಳ ಗೆಲುವು ಪಕ್ಕಾ ಎಂದರು. ಜೆಡಿಎಸ್ ಅಭ್ಯರ್ಥಿ ಮಹಾಬರಿ ಕಣದಿಂದ ಹಿಂದೆ ಬಂದಿದ್ದಾರೆ. ಅದಕ್ಕಾಗಿ ಇವರ ಚುನಾವಣೆಯಿಂದ ಸಂಪೂರ್ಣವಾಗಿ ರದ್ದು ಮಾಡಬೇಕು. ಇಲ್ಲದೇ ಹೋದ್ರೇ ಗೂಂಡಾಗಿರಿ, ಗಲಾಟೆ ಆಗುವ ಸಂಭವ ಇದೆ. ಅದಕ್ಕಾಗಿ ಚುನಾವಣಾಧಿಕಾರಿಗಳು ಇವರ ಮೇಲೆ ನಿಗಾವಹಿಸಬೇಕು.. ರಾಘವ ಅಣ್ಣಿಗೇರಿ, ಹಿಂದೂ ಮುಖಂಡ…