ವಿಜಯಪುರ: ರೌಡಿಶೀಟರ್ ಹೈದರ್ ಅಲಿ ನದಾಫ್ ಹತ್ಯೆ ಕೇಸ್ನಲ್ಲಿ ಐವರು ವಿರುದ್ಧ ಪ್ರಕರಣ ದಾಖಲಾಗಿದೆ. ವಿಜಯಪುರ ನಗರದ ಚಾಂದಪುರ ಕಾಲೋನಿಯಲ್ಲಿ ಶನಿವಾರ ನಡೆದ ಗುಂಡಿನ ದಾಳಿಯಲ್ಲಿ ಹೈದರ್ ಅಲಿ ನದಾಫ್ನ್ನು ಭೀಕರವಾಗಿ ಹತ್ಯೆಗೈದು ಆರೋಪಿಗಳು ಪರಾರಿಯಾಗಿದ್ದಾರೆ. ಇನ್ನೂ ಶೇಖ್ ಅಹ್ಮದ ಸುನೇನಸಾಬ್ ಮೋದಿ, ಎಸ್ಎಸ್ ಖಾದ್ರಿ, ತನ್ವೀರಪೀರಾ ಇಕ್ಬಾಲ್ಪೀರಾ ಪೀರಜಾದೆ, ವಾಜೀದಪೀರಾ ಇಕ್ಬಾಲ್ಪೀರಾ ಪೀರಜಾದೆ, ಶಾನವಾಜ್ ದಫೇದಾರ್ ವಿರುದ್ಧ ಕೇಸ್ ದಾಖಲಾಗಿದೆ. ಅಲ್ಲದೇ, ಐವರು ಸೇರಿದಂತೆ ಉಳಿದಂತೆ ಇನ್ನು 4-5 ಜನರ ವಿರುದ್ಧ ದೂರು ದಾಖಲಾಗಿದೆ. ಇನ್ನೂ ಇದೊಂದು ಫ್ರೀ ಪ್ಲ್ಯಾನ್ ಮಾಡಿಕೊಂಡು ಹತ್ಯೆಗೆ ಸಂಚು ರೂಪಿಸಿ ಗುಂಡಿನ ದಾಳಿ ಮಾಡಿದ್ದಾರೆ. ಇದಕ್ಕೆ ಎಲ್ಲಾ ಆ ಶಾಸಕನ ಉಳಿವಿಗಾಗಿ, ಆ ಮೂವರು ಪಂಚ ಶಾಸಕರ ಹತ್ತಿಕ್ಕಲು ಹಾಗೂ ಆ ಗುರುವಿಗೆ ಈ ಹತ್ಯೆ ಎಂದು ಉನ್ನತ ಮಾಹಿತಿ ಲಭ್ಯವಾಗಿದೆ. ಮುಂದಿನ ಸಂಚಿಕೆಯಲ್ಲಿ ಸಂಪೂರ್ಣ ಮಾಹಿತಿ ನಿಮ್ಮ ಮುಂದೆ.