ವಿಜಯಪುರ: ವಿಧಾನಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮೇ.10 ರಂದು ನಡೆಯಲಿರುವ ಮತದಾನಕ್ಕೆ ಮತಗಟ್ಟೆ ಸಿಬ್ಬಂದಿಗಳನ್ನು ಕರೆದೊಯ್ಯಲು ಮತ್ತು ಕರೆದುಕೊಂಡು ಬರಲು ಒಟ್ಟು 250 ವಾಹನಗಳು ಹಾಗೂ ಪೋಲಿಸ್ ಬಂದೊಬಸ್ತ್ ಕಾರ್ಯಕ್ಕೆ ಪೋಲಿಸ್ ಸಿಬ್ಬಂದಿಗಳನ್ನು ಕರೆದೊಯ್ಯಲು 30 ವಾಹನಗಳು ಸೇರಿದಂತೆ ಒಟ್ಟು 280 ವಾಹನಗಳನ್ನು ಒಪ್ಪಂದದ ಮೇಲೆ ಒದಗಿಸಲಾಗುತ್ತಿರುವುದರಿಂದ ವಿಭಾಗದ ಸ್ಥಳೀಯ ಸಾರಿಗೆಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕ ಪ್ರಯಾಣಿಕರು ಸಹಕರಿಸುವಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.