ವಿಜಯಪುರ: ರೌಡಿಶೀಟರ್ ಹೈದರ್ ಅಲಿ ಹತ್ಯೆ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ಶೇಖ್ಅಹ್ಮದ ಮೋದಿ, ಎಸ್ ಎಸ್ ಖಾದ್ರಿ, ಶಾನವಾಜ್ ದಫೇದಾರ್, ಫಯಾಜ್ ಮುರ್ಶದ, ಮೈಬೂಬ್ ಮಿರಜಕರ್ ಬಂಧಿತ ಆರೋಪಿಗಳು. ಇನ್ನು ಮೇ 6ರಂದು ರೌಡಿಶೀಟರ್ ಹೈದರ್ ಅಲಿ ನದಾಫ್ನ ಮೇಲೆ ಗುಂಡಿನ ದಾಳಿಗೈದು ಪರಾರಿಯಾಗಿದ್ದರು. ಅಲ್ಲದೇ, ಆರೋಪಿಗಳ ಮೇಲೆ ಕಲಂ 143, 147, 148, 341, 114, 302 ರೆ/ವು 149 ಅಡಿಯಲ್ಲಿ ಕೇಸ್ ದಾಖಲಾಗಿದೆ. ಈ ಕುರಿತು ಜಲನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.