ವಿಜಯಪುರ: ಬಿಜೆಪಿ ಅಭ್ಯರ್ಥಿ ಯತ್ನಾಳ ಗೆಲುವು ಸಾಧಿಸುತ್ತಿದ್ದಂತೆಯೇ ನಗರದಲ್ಲಿ ಸಂಚರಿಸಿ ಖಡ್ಗ ಪ್ರದರ್ಶನ ಮಾಡಿದ ಯುವಕನನ್ನು ರವಿವಾರ ರಾತ್ರಿ ವಿಜಯಪುರ ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ. ನಗರ ನಿವಾಸಿ ಮಹೇಶ ರಾಜಕುಮಾರ ಹಳ್ಳದಮನಿ (28) ಬಂಧಿತ ಆರೋಪಿ. ನಗರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಗೆಲುವು ಸಾಧಿಸಿದ ಬಳಿಕ ಈತ ಖಡ್ಗ ಝಳಪಿಸುತ್ತಾ ವಿಜಯೋತ್ವದಲ್ಲಿ ಭಾಗಿಯಾಗಿದ್ದನು. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಗಾಂಧಿಚೌಕ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.