ವಿಜಯಪುರ: ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ತಡೆಗೋಡೆ ಲಾರಿ ಡಿಕ್ಕಿಯಾಗಿರುವ ಘಟನೆ ವಿಜಯಪುರ ನಗರದ ವಜ್ರ ಹನುಮಾನ ಗೇಟ್ ಬಳಿ ರವಿವಾರ ನಡೆದಿದೆ. ಇನ್ನೂ ಅಪಘಾತದಲ್ಲಿ ಲಾರಿಯ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಅಲ್ಲದೇ, KA 52 B 3971 ಲಾರಿ ಅಪಘಾತದಿಂದ ತಡೆಗೋಡೆ ಕಟ್ ಆಗಿದೆ. ಆದ್ರೇ, ಯಾವುದೇ ಪ್ರಾಣ ಹಾನಿಯಾಗಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಜಯಪುರ ಸಂಚಾರಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.