ವಿಜಯಪುರ: ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಹಾಡಹಗಲೆ ಅಟ್ಯಾಕ್ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ಹೊರವಲದಲ್ಲಿ ಬುಧವಾರ ನಡೆದಿದೆ. ಇಬ್ಬರು ದುಷ್ಕರ್ಮಿಗಳು ಪಲ್ಸರ್ ಬೈಕ್ ಮೇಲೆ ಬಂದು ರಿಯಲ್ ಎಸ್ಟೇಟ್ ಉದ್ಯಮಿ
ಗಂಗುಸಿಂಗ್ ರಜಪೂತ ಎಂಬುವರ ಕಾರ್ ಮೇಲೆ ಅಟ್ಯಾಕ್ ಮಾಡಿದ್ದಾರೆ. ಕಾರ್ನಲ್ಲಿ ಉದ್ಯಮಿ ಗಂಗಾಸಿಂಗ್ ಇದ್ದಾನೆ ಎಂದು ಭಾವಿಸಿ ದುಷ್ಕರ್ಮಿಗಳಿಂದ ಅಟ್ಯಾಕ್ ನಡೆದಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಉದ್ಯಮಿ ಪಾರಾಗಿದ್ದಾನೆ. ಬಸವನಬಾಗೇವಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.