ಧಾರವಾಡ: ಸಮಾಜದ ಪ್ರತಿಭೆಗಳಿಗೆ ಸಮಾಜದ ಸಂಘಟನೆಗಳು ಗುರುತಿಸಿ, ಸತ್ಕರಿಸುವ ಕಾರ್ಯ ಅತ್ಯಂತ ಶ್ರೇಷ್ಠ ಕಾರ್ಯ, ಯಾವುದೇ ಸಮಾಜ ಇರಲಿ ತಮ್ಮ ತಮ್ಮ ಸಮಾಜದ ಪ್ರತಿಭೆಗಳಿಗೆ, ಸತ್ಕರಿಸುವ, ಮತ್ತು ಸಮಾಜದಲ್ಲಿ ಇರುವ ಬಡವರನ್ನು ಮೇಲೆತ್ತುವ ಕಾರ್ಯ ನಿರಂತರವಾಗಿ ಸಾಗಬೇಕು, ಈ ನಿಟ್ಟಿನಲ್ಲಿ ನಮ್ಮ ವೈಷುದೀಪ ಪೌಂಡೇಶನ ಸಹಾಯ ಸಹಕಾರ ಮಾಡಲಿದೆ ಎಂದು ಧಾರವಾಡದ ವೈಷುದೀಪ ಪೌಂಡೇಶನ ಮುಖ್ಯಸ್ಥೆ ಶಿವಲೀಲಾ ವಿನಯ ಕುಲಕರ್ಣಿ ಹೇಳಿದರು. ನಗರದ ಆಲೂರ ವೆಂಕಟರಾವ್ ಸಭಾಂಗಣದಲ್ಲಿ ಜರುಗಿದ ಗಾಣಿಗ ಸಮಾಜದ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ, ಈ ಕಾರ್ಯಕ್ರಮ ಸಂಘಟಿಸಿ, ಯಶಸ್ವಿಯಾಗಿ ಕಾರ್ಯಕ್ರಮ ಮಾಡಿದ ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾದ ಧಾರವಾಡ ಜಿಲ್ಲಾ ಅದ್ಯಕ್ಷರಾದ ಮಲ್ಲಪ್ಪ ಹೊಸಕೇರಿ ಅವರು ನಿಮ್ಮ ಸಂಘಟನೆಯ ಮೂಲಕ ಹೆಚ್ಚು ಹೆಚ್ಚು ಸಮಾಜೋಪಯೋಗಿ ಕಾರ್ಯಕ್ರಮ ಮಾಡುವವಂತೆ ಕಿವಿಮಾತು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಸಮಾಜದ ಹಿರಿಯರಾದ ಜಿ ಎಸ್ ಛಬ್ಬಿ ಮಾತನಾಡಿ ಸದ್ಯದಲ್ಲೇ ಅಖಿಲ ಭಾರತ ಗಾಣಿಗ ಸಂಘ ಮತ್ತು ಅದರ ಅಡಿಯಲ್ಲಿ ಇರುವ ಶಾಲೆಗೆ ಹೊಸ ಕಾಯಕಲ್ಪ ಮಾಡಲಾಗುವುದು, ಸಂಘಟನೆಯಲ್ಲಿ ಆಸಕ್ತಿ ಇರುವವರು ನಮ್ಮ ಸಂಪರ್ಕದಲ್ಲಿ ಇರಬೇಕು ಎಂದರು. ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾದ ರಾಜ್ಯಾದ್ಯಕ್ಷರಾದ ಆನಂದ ಕೆ ಮಂಡ್ಯ ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾ ಸಮಾಜದ ಹಿತಕ್ಕಾಗಿ ನಿತ್ಯ ನಿರಂತರ ಹೋರಾಟ ಮಾಡಲು ಕಟ್ಟಿದ ಸಂಘಟನೆಯಾಗಿದೆ, ಜೊತೆಗೆ ಗಾಣಿಗ ನಿಗಮಕ್ಕೆ ಹೆಚ್ಚಿನ ಹಣ ಮೀಸಲಿಡಬೇಕು, ಗಾಣಿಗ ಉದ್ಯಮ ಬೆಳೆಯಲು ಮುಖ್ಯಮಂತ್ರಿಗಳು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು. ಆನಂದ ಮಂಡ್ಯ ಮಲ್ಲಪ್ಪ ಹೊಸಕೇರಿ ರಾಯಪ್ಪ ಗಾಣಿಗೇರ ಬಿ ಜಿ ಬಶೆಟ್ಟಿ ಶ್ರೀಶೈಲ ಗಡದಿನ್ನಿ, ಜಿ ಟಿ ಶಿರೋಳ ಭೀಮಪ್ಪ ಕಾಸಾಯಿ ಅರವಿಂದ ಏಗನಗೌಡರ,ಭದ್ರಾವತಿ ವೆಂಕಟೇಶ ಅಶೋಕ ನಾಗಸಮುದ್ರ ಪರಶುರಾಮ ಗಡದಿನ್ನಿ ಶೋಭಾ ಗಾಣಿಗೇರ, ಅಶೋಕ ಮಜ್ಜಿಗುಡ್ಡ, ಸಂತೋಷಕುಮಾರ ಹುಣಶ್ಯಾಳ ನಿಂಗಪ್ಪ ನಡುವಿನಹಳ್ಳಿ.ಶಕುಂತಲಾ ತೇಲಿ, ಎಲ್ ಐ ಲಕ್ಕಮ್ಮನವರ ಚಂದ್ರಶೇಖರ ಮಾಡಲಗೇರಿ, ಎಂ ಎಸ್ ಗಾಣಿಗೇರ ಪೂರ್ಣಿಮಾ ನಿಚ್ಚಾಳ ಗಂಗಪ್ಪ ಗಾಣಿಗೇರ ಪ್ರಕಾಶ ಹೊಸಕೇರಿ, ಗಂಗೂಲಿ ಗಾಣಿಗೇರ ಈಶ್ವರ ಗಾಣಿಗೇರ ಮುಂತಾದವರು ಉಪಸ್ಥಿತರಿದ್ದರು.