ವಿಜಯಪುರ: ವಿಜಯಪುರ ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ 108 ಆಂಬುಲೆನ್ಸ್ ಸಿಬ್ಬಂದಿ ವತಿಯಿಂದ 108 ಆಂಬುಲೆನ್ಸ್ ಚಾಲಕರ ದಿನಾಚರಣೆಯನ್ನು ಆಚರಸಿಲಾಯಿತು. ತುರ್ತು ಪರಿಸ್ಥಿತಿಯಲ್ಲಿ ದಕ್ಷತೆಯಿಂದ ಹಾಗೂ ಪ್ರಾಮಾಣಿಕತೆಯಿಂದ ಸಾವಿರಾರು ಜನರ ನೋವು-ತೊಂದರೆಗಳಿಗೆ ಸ್ಪಂದಿಸಿ 108 ಚಾಲಕರು ಕಾರ್ಯದಕ್ಷತೆಯಿಂದ ಸಲ್ಲಿಸಿದ ಸೇವೆ ಶ್ಲಾಘನೀಯ. ಇನ್ನೂ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ 108 ತುರ್ತು ವಾಹನದ ಅಂತರಾಷ್ಟ್ರೀಯ ಚಾಲಕರ ದಿನಾಚರಣೆ ಕೂಡ ನಡೆಯಿತು. ರಸ್ತೆ ಅಪಘಾತ, ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆಯರಿಗೂ ಹಗಲು-ರಾತ್ರಿಯನ್ನದೆ ತುರ್ತು ಪರಿಸ್ಥಿತಿಯಲ್ಲಿರುವಂತ ರೋಗಿಗಳಿಗೆ ಪ್ರಾಣ ಉಳಿಸುವುದಕ್ಕೆ ಪ್ರಮಾಣಿಕತೆಯಿಂದ ತಮ್ಮ ಕರ್ತವ್ಯ ನಿರ್ವಹಿಸಿ ಸಾವುನುವಿನಲ್ಲಿ ಇರುವಂತ ಜನಗಳಿಗೆ ಆಪದ್ಬಾಂಧವರಾಗಿ ಕರೆ ಮಾಡಿದ ಕೂಡಲೇ ತಕ್ಷಣ ಸ್ಪಂದಿಸುವಂತಹ ಕಾರ್ಯವನ್ನು108 ತುರ್ತು ವಾಹನದ ಚಾಲಕರ ಸೇವೆ ಅನನ್ಯವಾಗಿದೆ ಎಂದು 108 ಮ್ಯಾನೇಜರ್ ಹಫೀಜ್ ಮುಲ್ಲಾ ಹೇಳಿದರು. ಈ ವೇಳೆ ರೇವುತಪ್ಪ, ವಿಶ್ವನಾಥ, ನಾಗರಾಜ, ಹಾಗೂ ಆಂಬುಲೆನ್ಸ್ ಚಾಲಕರು ಇದ್ದರು.